
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಐರಾವತ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಐಷಾರಾಮಿ ಕಾರು ಖರೀದಿಸಿರುವುದು ಸುದ್ದಿಯಾಗಿದೆ.
ಅವರು 12 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರು ಖರೀದಿಸಿದ್ದು, ಇದರಿಂದ ಭಾರತದಲ್ಲಿ ಈ ಕಾರನ್ನು ಹೊಂದಿರುವ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗದಿದ್ದರೂ, ಊರ್ವಶಿ ರೌಟೇಲಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಕಾರಿನಿಂದ ಇಳಿಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ರೂ. 10.50 ಕೋಟಿ ರಿಂದ ರೂ. 12.25 ಕೋಟಿ (ಎಕ್ಸ್ ಶೋರೂಂ) ಬೆಲೆಯ ಈ ಕಾರು ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6750 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 563 ಹಾರ್ಸ್ ಪವರ್ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. 6.6 ಕೆಎಂಪಿಎಲ್ ಮೈಲೇಜ್ ನೀಡುವ ಈ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮಂಟ್ ಸಿಸ್ಟಮ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, 8 ಏರ್‌ಬ್ಯಾಗ್‌ಗಳು, ಎಬಿಎಸ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳೂ ಇವೆ.