
ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೇಷ್ಮಾ ಮಲಲಿ ಭಜಂತ್ರಿ (26) ಎಂಬುವರು ನಾಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಹಾವೇರಿ ಜಿಲ್ಲೆ, ಹಾನಗಲ್ ತಾಲೂಕಿನ ಸಂಕ್ರಿಕೊಪ್ಪ ನಿವಾಸಿ ಭೀಮಪ್ಪ ಅವರ ಪತ್ನಿ.
ಭೀಮಪ್ಪ ಮತ್ತು ರೇಷ್ಮಾ ದಂಪತಿ ನೆಕ್ಕಿಲಾಡಿಯ ಇಮ್ಮಿಯಾಜ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಾಗರ ಪಂಚಮಿ ಹಬ್ಬಕ್ಕಾಗಿ ಜುಲೈ 26 ರಂದು ಭೀಮಪ್ಪ ಹಾವೇರಿಗೆ ತೆರಳಿದ್ದರು. ಜುಲೈ 30 ರಂದು ಅವರು ಹಿಂತಿರುಗಿ ಬಂದಾಗ ರೇಷ್ಮಾ ಮನೆಯಲ್ಲಿ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಭೀಮಪ್ಪ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.