spot_img

ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ₹3,000ಕ್ಕೆ ವಾರ್ಷಿಕ ಪಾಸ್ ಘೋಷಣೆ

Date:

ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸದಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ. ಆಗಸ್ಟ್ 15, 2025ರಿಂದ ಜಾರಿಗೆ ಬರುವ ಈ ಹೊಸ ಯೋಜನೆಯು ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

₹3,000ಕ್ಕೆ 1 ವರ್ಷ ಅಥವಾ 200 ಟ್ರಿಪ್‌ಗಳು!
ಈ ಪಾಸ್ ನಿಂದ ಕಾರು, ಜೀಪ್ ಹಾಗೂ ವ್ಯಾನ್ ಮಾದರಿಯ ಖಾಸಗಿ ವಾಹನಗಳು ದೇಶದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ತೊಂದರೆರಹಿತವಾಗಿ ಸಂಚರಿಸಬಹುದು. ರೂ.3,000 ಪಾವತಿಸಿದರೆ ಒಂದು ವರ್ಷ ಅಥವಾ 200 ಬಾರಿ ಪ್ರಯಾಣ (ಯಾವುದು ಮೊದಲು ಸಾದ್ಯವಾಗುತ್ತದೆಯೋ ಅದು) ಮಾಡಲು ಅವಕಾಶ ದೊರೆಯಲಿದೆ.

ಪ್ರಯೋಜನಗಳು :

  • ಈ ಪಾಸ್ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ, ವೇಗದ, ದಟ್ಟಣೆ ರಹಿತ ಪ್ರಯಾಣಕ್ಕೆ ಸಹಾಯ ಮಾಡಲಿದೆ.
  • ಇದರ ಮೂಲಕ ಟೋಲ್ ಪ್ಲಾಜಾಗಳಲ್ಲಿ ಕಾಯುವಿಕೆ ಕಡಿಮೆಯಾಗುವುದು, ಪಾವತಿ ವಿವಾದಗಳು ಮತ್ತು ಸಮಯದ ನಷ್ಟ ತಪ್ಪುವ ಸಾಧ್ಯತೆ ಇದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಎಲ್ಲಿ ಲಭ್ಯ?
ಪಾಸ್ ಸಕ್ರಿಯಗೊಳಿಸಲು ಹಾಗೂ ನವೀಕರಿಸಲು NHAI, MoRTH ವೆಬ್‌ಸೈಟ್‌ಗಳು ಮತ್ತು ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್ ಮೂಲಕ ಶೀಘ್ರದಲ್ಲೇ ಲಿಂಕ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

60 ಕಿ.ಮೀ ವ್ಯಾಪ್ತಿಯಲ್ಲಿರುವ ಟೋಲ್ ಸಮಸ್ಯೆಗಳಿಗೆ ಪರಿಹಾರ :
ಸುತ್ತಲಿನ ಟೋಲ್ ಪ್ಲಾಜಾಗಳ ಬಗೆಯ ದೀರ್ಘಕಾಲದ ಸಮಸ್ಯೆಗಳಿಗೆ ಇದು ಪರಿಹಾರ ನೀಡಲಿದೆ. ವ್ಯವಹಾರ ಸರಳತೆ, ಸಮಯದ ದಕ್ಷತೆ, ಚಾಲಕರಿಗೆ ಅನುಕೂಲತೆ ಎಂಬ ಮುಖ್ಯ ಗುರಿಯನ್ನು ಈ ಯೋಜನೆ ಹೊಂದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಜ್ಞಾನಸುಧಾ – ಶಿಕ್ಷಕರ ದಿನಾಚರಣೆಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಅಧ್ಯಕ್ಷರಾದ ಶ್ರೀಯುತ ಎಮ್ ಕೆ ದಿನೇಶ್ ಮೂಡಬಿದ್ರಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುದರ ಮುಖೇನ ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ನಡೆಯಿತು.

ಹಿಂದೂ ಹೆಣ್ಣು ಮಕ್ಕಳ ಮೇಲೆ ಪುರುಷ ಪೇದೆಯ ದೌರ್ಜನ್ಯ ಎಷ್ಟು ಸಮಂಜಸ ? ? – ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ

ಹಿಂದೂ ಹೆಣ್ಣು ಮಕ್ಕಳ ಮೇಲೆ ಪುರುಷ ಪೇದೆಯ ದೌರ್ಜನ್ಯ ಎಷ್ಟು ಸಮಂಜಸ ?ಎಂದು ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಮೇಲ್‌ನಲ್ಲಿ ಅಡಗಿರುವ 5 ಮಹತ್ವದ ವೈಶಿಷ್ಟ್ಯಗಳು: ಇಮೇಲ್ ಬಳಕೆ ಇನ್ನಷ್ಟು ಸುಲಭ

ಜಿಮೇಲ್‌ನಲ್ಲಿರುವ 5 ಮಹತ್ವದ ವೈಶಿಷ್ಟ್ಯಗಳು ನಮ್ಮ ದೈನಂದಿನ ಕೆಲಸವನ್ನು ಇನ್ನಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿಸುತ್ತವೆ.