
ಬೆಂಗಳೂರು, ಮಾರ್ಚ್ 25: ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ಮೂರು ದಿನಗಳ ರಜೆ ಸಿಕ್ಕಿರುವುದರಿಂದ ಊರಿಗೆ ತೆರಳಲು ಸಜ್ಜಾದವರ ಮೇಲೆ ಖಾಸಗಿ ಬಸ್ ದರ ಏರಿಕೆಯ ಶಾಕ್ ಬಿದ್ದಿದೆ. ಮಾರ್ಚ್ 29 ಯುಗಾದಿ, ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಬಹುತೇಕರು ಊರಿಗೆ ಹೋಗಲು ತಯಾರಿ ನಡೆಸಿದ್ದಾರೆ. ಆದರೆ, ಖಾಸಗಿ ಬಸ್ ಮಾಲೀಕರು ದರವನ್ನು ಶೇ.50-60ರಷ್ಟು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿ, “ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಸರ್ಕಾರಿ ಪ್ರೋತ್ಸಾಹ ಸಿಗದ ಕಾರಣ, ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ” ಎಂದಿದ್ದಾರೆ.
ಹಬ್ಬದ ಪ್ರಯುಕ್ತ ಬಸ್ ದರ ಎಷ್ಟು ಹೆಚ್ಚಳ?
ಬೆಂಗಳೂರು-ದಾವಣಗೆರೆ: ₹450-1300 ➝ ₹750-5500
ಬೆಂಗಳೂರು-ಧಾರವಾಡ: ₹600-1100 ➝ ₹1069-5500
ಬೆಂಗಳೂರು-ಹುಬ್ಬಳ್ಳಿ: ₹475-1100 ➝ ₹1200-4200
ಬೆಂಗಳೂರು-ಬೆಳಗಾವಿ: ₹389-1200 ➝ ₹1129-5500
ಬೆಂಗಳೂರು-ಮಂಗಳೂರು: ₹650-1300 ➝ ₹1200-4500
ಬೆಂಗಳೂರು-ಕಲ್ಬುರ್ಗಿ: ₹750-1000 ➝ ₹1200-2200
ಬೆಂಗಳೂರು-ರಾಯಚೂರು: ₹650-990 ➝ ₹1100-2990
ಬೆಂಗಳೂರು-ಹಾಸನ: ₹463-1000 ➝ ₹750-1600
ಬೆಂಗಳೂರು-ಯಾದಗಿರಿ: ₹699-900 ➝ ₹1300-2200
ಬೆಂಗಳೂರು-ಶಿವಮೊಗ್ಗ: ₹500-990 ➝ ₹1199-1800
ಹಬ್ಬದ ಪ್ರಯುಕ್ತ ಊರಿನತ್ತ ತೆರಳುವವರಿಗೆ ಈ ಬಾರಿಯ ಬಸ್ ದರ ಏರಿಕೆ ಭಾರೀ ಹೊಡೆತ ನೀಡಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳತ್ತ ತಿರುಗುತ್ತಿದ್ದಾರೆ.