spot_img

ಉಡುಪಿ ಜಿಲ್ಲೆಗೆ ಹೊಸ ಡಿಸಿ: ಸ್ವರೂಪಾ ಟಿ.ಕೆ ಅಧಿಕಾರ ಸ್ವೀಕಾರ, ಡಾ. ವಿದ್ಯಾಕುಮಾರಿಗೆ ಆತ್ಮೀಯ ಬೀಳ್ಕೊಡುಗೆ!

Date:

spot_img

ಮಣಿಪಾಲ : ಉಡುಪಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯಾಗಿ ಸ್ವರೂಪಾ ಟಿ.ಕೆ ಅವರು ಬುಧವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಡಿಸಿ ಡಾ. ಕೆ. ವಿದ್ಯಾಕುಮಾರಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು ಹಾಗೂ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕಾರದ ಬಳಿಕ, ಸ್ವರೂಪಾ ಟಿ.ಕೆ ಅವರು ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ತಹಶೀಲ್ದಾರ್‌ಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದರು. ಈ ಹಿಂದೆ ಅವರು ಬೆಂಗಳೂರು ಆರ್‌ಡಿಪಿಆರ್‌ ಇಲಾಖೆಯಲ್ಲಿ ಇ-ಗವರ್ನೆನ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಅದೇ ದಿನ ಮಣಿಪಾಲದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಡಾ. ವಿದ್ಯಾಕುಮಾರಿಯವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ವೇಳೆ ಮಾತನಾಡಿದ ಡಾ. ವಿದ್ಯಾಕುಮಾರಿ, “ಇದುವರೆಗೆ ಉಡುಪಿ ಜಿಲ್ಲೆಯ ಜನ ಹಾಗೂ ಅಧಿಕಾರಿಗಳ ಸಹಕಾರದಿಂದ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ಧಿಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಸಾಧ್ಯವಾಯಿತು” ಎಂದರು.

ಹೊಸ ಡಿಸಿ ಸ್ವರೂಪಾ ಟಿ.ಕೆ ಮಾತನಾಡುತ್ತಾ, “ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಠಿಣವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಎಸ್‌ಪಿ ಹರಿರಾಮ್ ಶಂಕರ್, ಎಎಸ್‌ಪಿ ಹರ್ಷಂ ಪ್ರಿಯಂವದ, ಕರಾವಳಿ ಕಾವಲು ಪಡೆ ಎಸ್‌ಪಿ ಮಿಥುನ್, ಡಿಎಫ್‌ಒ ಗಣಪತಿ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸ್ವಾಗತಿಸಿ, ಕ್ರೀಡಾ ಇಲಾಖೆ ಉಪನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಯಲ್ಲಾಪುರ ಸಮೀಪ ಭೀಕರ ರಸ್ತೆ ಅಪಘಾತ- ಕೆಎಸ್ಆರ್‌ಟಿಸಿ ಬಸ್-ಲಾರಿ ಡಿಕ್ಕಿ, ಮೂವರು ಬಲಿ

ಕೇರಳ ಮೂಲದ ಲಾರಿ, ಬಾಗಲಕೋಟೆ ಬಸ್ - ಯಲ್ಲಾಪುರ ಘಟ್ಟದಲ್ಲಿ ಸಂಭವಿಸಿದ ಭೀಕರ ಅಪಘಾತ

ಮನುಷ್ಯರಂತೆ ಯೋಚಿಸುವ ಏಜೆಂಟಿಕ್ Ai ನಿರ್ಮಿಸುತ್ತಿದೆ ಮೈಕ್ರೋಸಾಫ್ಟ್

ಕೀಬೋರ್ಡ್, ಮೌಸ್‌ಗಳಿಲ್ಲದ ಭವಿಷ್ಯದ ವಿಂಡೋಸ್ 2030

ಕೋಸು ತರಕಾರಿಯಲ್ಲ, ಅದೊಂದು ಸೂಪರ್ ಫುಡ್! ದೇಹದ ರಕ್ಷಣೆಗೆ ಇದರ ಪಾತ್ರ ಅತ್ಯಗತ್ಯ ಏಕೆ?

ಸಾಮಾನ್ಯವಾಗಿ ಆಹಾರದಲ್ಲಿ ಹಿಂದುಳಿದಿರುವ ಕೋಸು, ವಾಸ್ತವವಾಗಿ ಆರೋಗ್ಯದ ಭಂಡಾರವೇ ಸರಿ

ಪರ್ಕಳ: ಅಗ್ರಹಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಳೆಯಿಂದ ಸಿಂಹಮಾಸದ ವಿಶೇಷ ಪೂಜೆ

ಹೆರ್ಗ ಗ್ರಾಮದ ಅಗ್ರಹಾರದಲ್ಲಿರುವ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಿಂಹಮಾಸದ ವಿಶೇಷ ಪೂಜೆಯಾದ ಸೋಣಾರತಿಯು ನಾಳೆಯಿಂದ ಆರಂಭಗೊಳ್ಳಲಿದೆ.