
ಉಡುಪಿ: ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ (ರಿ.) ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ್ ಕುಮಾರ್ ಅಂಬಾಡಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಕಾರ್ಯದರ್ಶಿಯವರಾದ ಶ್ರೀ ಸುಧಾಕರ್ ಕಾರ್ಕಳ ಸ್ವಾಗತ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್‌ನ ಶ್ರೀ ದಿನೇಶ್ ಮೂಡಬಿದ್ರಿಯವರು ಮಹಾಸಭೆಯ ಪ್ರಾಮುಖ್ಯತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಹರೀಶ್ ಅಮೀನ್ ಸಂತೆಕಟ್ಟೆಯವರು ವರದಿ ವಾಚನ ಮಾಡಿದರು, ಹಾಗೂ ಕೋಶಾಧಿಕಾರಿಯವರಾದ ಶ್ರೀ ಸಂದೀಪ್ ಮಣಿಪಾಲ್ ರವರು ಲೆಕ್ಕಪತ್ರಗಳನ್ನು ಮಂಡಿಸಿದರು. ಭಾರತಮಾತೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ, ಇತ್ತೀಚೆಗೆ ಪಹಲ್ಗಾಂವ್ ಮತ್ತು ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ವೇಳೆ, ಸಂಘದ ಸದಸ್ಯರಾದ ದಿನೇಶ್ ತೆಕ್ಕಟ್ಟೆ, ವಿಜಯ್ ಅಂಕದಕಟ್ಟೆ, ಅಶ್ವಿನ್ ಕಾರ್ಕಳ, ದಯಾನಂದ ಬೈಲೂರು, ದಿನೇಶ್ ದೊಡ್ಡಣಗುಡ್ಡೆ, ರೆಹಮತುಲ್ಲಾ ಉಡುಪಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು. ಅನಾರೋಗ್ಯಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀ ಸತೀಶ್ ಕಡೆಕಾರ್ ರವರಿಗೆ ₹25,000/- ಆರ್ಥಿಕ ನೆರವು ನೀಡಲಾಯಿತು.
ಶ್ರೀ ಪ್ರಸನ್ನ ಅಜೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಹಾಗೂ ಶ್ರೀ ಸುಧಾಕರ್ ಕಾರ್ಕಳ ವಂದನಾರ್ಪಣೆ ಮಾಡಿದರು.