ಕೇಸರಿ ಧ್ವಜದ ವಿವಾದ ಬಗ್ಗೆ ಪ್ರಸಾದ್ ಕಾಂಚನ್ ರಿಗೆ ಮಾತನಾಡಲು ಭಯವೇ? : ಬಾಲಕೃಷ್ಣ ಶೆಟ್ಟಿ

Date:

spot_img

ಉಡುಪಿ ಪರ್ಯಾಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳು ಕೇಸರಿ ಧ್ವಜದ ಮೂಲಕ ಚಾಲನೆ ನೀಡಿದ ಬಗ್ಗೆ ಕಾಂಗ್ರೆಸ್ ಪಕ್ಷ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ವಿಚಾರದ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ತಾಳಿರುವ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ರಿಗೆ ಈ ವಿಚಾರದಲ್ಲಿ ಮಾತನಾಡಲು ಭಯವಾದಂತಿದೆ ಎಂದು ಉಡುಪಿ ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಟೋಪಿ ಧರಿಸಿ ಮಸೀದಿಗಳಿಗೆ ತೆರಳಿ ಮತ ಯಾಚಿಸಿದ ಪ್ರಸಾದ್ ಕಾಂಚನ್ ಅವರ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಅನುಕಂಪ ಮೂಡುತ್ತಿದೆ. ಈ ವಿಚಾರದಲ್ಲಿ ಮಾತನಾಡಿದರೆ ಎಲ್ಲಿ ಅಲ್ಪಸಂಖ್ಯಾತರು ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕದಿಂದ ಪ್ರಸಾದ್ ಕಾಂಚನ್ ಮೌನ ವಹಿಸಿದಂತಿದೆ.

ಕಾಂಗ್ರೆಸ್ ಪಕ್ಷದ ಹಿಂದೂ ಕಾರ್ಯಕರ್ತರಿಗೆ ತಮ್ಮದೇ ಧರ್ಮದ ಭಗವಾಧ್ವಜದ ಬಗ್ಗೆ ಅಗೌರವ ಮೂಡಿಸುವ ಕೆಲಸ ನಡೆಯುತ್ತಿದ್ದರೂ ಇದರ ವಿರುದ್ಧ ತುಟಿ ಬಿಚ್ಚಲು ಹೆದರುವ ಸನ್ನಿವೇಶ ನಿರ್ಮಾಣವಾಗಿದೆ ಎಂಬುದಕ್ಕೆ ಪ್ರಸಾದ್ ಕಾಂಚನ್ ರವರ ದಿವ್ಯ ಮೌನವೇ ಸಾಕ್ಷಿ.

ದೇವಸ್ಥಾನ, ಮಠ, ಮಂದಿರಗಳ ಧಾರ್ಮಿಕ ಸಭೆಯ ವೇದಿಕೆಯಲ್ಲಿ ಹಿಂದುತ್ವದ ಬಗ್ಗೆ ಡೋಂಗಿ ಭಾಷಣ ಮಾಡುವ ಪ್ರಸಾದ್ ಕಾಂಚನ್ ಅವರ ನಕಲಿ ಹಿಂದುತ್ವದ ಮುಖವಾಡ ಕಳಚಿ ಬಿದ್ದಿದೆ ಎಂದು ಬಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಹೆಬ್ರಿಯ ಮುನಿಯಾಲಿನಲ್ಲಿ ವ್ಯಕ್ತಿ ನಾಪತ್ತೆ – ಮಾಹಿತಿ ನೀಡಿ

ಹೆಬ್ರಿಯ ಮುನಿಯಾಲಿನಲ್ಲಿ ವಿಶ್ವನಾಥ ಶೆಟ್ಟಿ ಎಂಬವರು ಜುಲೈ 13 ರಿಂದ ನಾಪತ್ತೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಗೃಹಜ್ಯೋತಿ ಪರಿಶೀಲನೆ: ಗ್ರಾಪಂನಲ್ಲೇ ಪ್ರಕ್ರಿಯೆ ನಡೆಸಲು ಆದೇಶ

ಕಾರ್ಕಳದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಇನ್ಮುಂದೆ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಲಂಚ ಕೇಳಿದರೆ ಅಮಾನತು ಎಚ್ಚರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ