
ಉಡುಪಿ ನಗರದ ಖಾಸಗಿ ಫೈನಾನ್ಸ್ ಮಾಲಕರೊಬ್ಬರು ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತರು ಕಿನ್ನಿಮೂಲ್ಕಿ ಕರ್ನಪ್ಪಾಡಿ ನಿವಾಸಿ ಮುರಳೀಧರ್ ಬಲ್ಲಾಳ್ (56) ಆಗಿದ್ದು, ಅವರು ಉಡುಪಿ ಮಿತ್ರ ಆಸ್ಪತ್ರೆ ಎದುರಿನ ಬಲ್ಲಾಳ್ ಫೈನಾನ್ಸ್ ಮಾಲಕರಾಗಿದ್ದರು.ಅವರು ಮನೆಯವರಲ್ಲಿ ವಿಪರೀತ ಬೆವರು ಮತ್ತು ಸುಸ್ತಾಗುತ್ತಿದೆ ಎಂದು ಹೇಳಿ ಸುಧಾರಿಸಿಕೊಳ್ಳುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಆಗಲೇ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಬಲ್ಲಾಳ್ ಅವರು ಕನ್ನರ್ಪಾಡಿ ಜಯ ದುರ್ಗಾ ಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾಗಿದ್ದರು ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು.