ಜಿಲ್ಲೆಯ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕೋಟಾದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ: ಮಂಜುನಾಥ್ ಭಟ್ ಸಾರಥ್ಯ

Date:

spot_img

ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘ, ಉಡುಪಿ ಇದರ 21 ನೂತನ ಪದಾಧಿಕಾರಿಗಳನ್ನು ದಿನಾಂಕ 17.09.2025 ಬುಧವಾರ ವಿವೇಕ ಪದವಿ ಪೂರ್ವ ಕಾಲೇಜು ಕೋಟ ಇಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಉಡುಪಿ ಜಿಲ್ಲಾ ಪ. ಪೂ ಪ್ರಾಂಶುಪಾಲರ ಸಂಘದ ಗೌರವ ಅಧ್ಯಕ್ಷರಾಗಿ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಇದರ ಶ್ರೀ ಮಾರುತಿ, ಅಧ್ಯಕ್ಷರಾಗಿ ಸರಕಾರಿ ಪದವಿಪೂರ್ವ ಕಾಲೇಜು ಹಿರಿಯಡ್ಕ (ಕೆ.ಪಿ.ಎಸ್) ಇದರ ಪ್ರಾಂಶುಪಾಲರಾದ ಮಂಜುನಾಥ್ ಭಟ್, ಕಾರ್ಯದರ್ಶಿಯಾಗಿ ಭುವನೇಂದ್ರ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ಪ್ರಾಂಶುಪಾಲರಾದ ರಮೇಶ್ ಎಸ್. ಸಿ, ಖಜಾಂಚಿಯಾಗಿ ತ್ರಿಶಾ ಪದವಿಪೂರ್ವ ಕಾಲೇಜು ಕಟಪಾಡಿ ಇದರ ಪ್ರಾಂಶುಪಾಲರಾದ ಹರಿಪ್ರಸಾದ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ನಾವಡ, ಕ್ರೀಡಾ ಸಂಚಾಲಕರಾಗಿ ಶ್ರೀ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಉಡುಪಿ ಇದರ ಪ್ರಾಂಶುಪಾಲರಾದ ಸಂತೋಷ್ ಹಾಗೂ ಪರೀಕ್ಷಾ ಸಂಚಾಲಕರಾಗಿ ಸರಕಾರಿ ಪದವಿ ಪೂರ್ವ ಕಾಲೇಜು (ಕೆ.ಪಿ.ಎಸ್) ಪ್ರಾಂಶುಪಾಲರಾದ ರವೀಂದ್ರ ಉಪಾಧ್ಯ ಹಾಗೂ ರಾಜ್ಯ ಸಂಘದ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ ಭಂಡಾರ್ಕರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಎಮ್ ಗೊಂಡ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರು, ಸರ್ಕಾರಿ ಪದವಿ ಪೂರ್ವ ಕಾಲೇಜು ಮಲ್ಪೆಯ ಪ್ರಾಂಶುಪಾಲರಾದ ವರ್ಗಿಸ್ ಪಿ ಇವರನ್ನು ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕರಬ, ಜಗದೀಶ್ ಕುಮಾರ್, ಸುಶೀಲಾ, ಜಗದೀಶ್ ಭಟ್, ಸುಜಾತ ಎಂ, ಪ್ರಕಾಶ್ ಶೆಟ್ಟಿ, ಸೀತಾರಾಮ್, ಗ್ರೆಟ್ಟಾ ಮೊರಾಸ್, ಸುಚೇತಾ, ಮಾಲತಿ ದೇವಿ, ಕವಿತಾ, ಡಾ.ಜಾರ್ಜ್, ಗೋಪಾಲಕೃಷ್ಣ ಮತ್ತು ರಿಚರ್ಡ್ ಜೀವನ್ ಮೊರಾಸ್ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ತಾಲ್ಲೂಕು ನೋಡಲ್ ಸೆಂಟರ್ ನ ಸದಸ್ಯರಾಗಿ ಪ್ರಾಂಶುಪಾಲರುಗಳಾದ ಲೀಲಾಬಾಯಿ ಭಟ್, ಡಾ. ಸುಮಾ, ಅನ್ನಪೂರ್ಣ ಕಾಮತ್, ರಾಮಕೃಷ್ಣ ಬಿ.ಜಿ ಮತ್ತು ವೆಂಕಟರಮಣ ನಾಯಕ್ ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಂಚೊಟ್ಟಿಯಲ್ಲಿ ಜುಲೈ 26 ರಂದು ‘ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ!

ಬೊಮ್ಮಾರಬೆಟ್ಟು ಗ್ರಾಮಸ್ಥರಿಗಾಗಿ ಹಿರಿಯಡ್ಕ ಮಂಚೊಟ್ಟಿಯಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪಿಲಿಕುಳ ಮೃಗಾಲಯ ಅರಣ್ಯ ಇಲಾಖೆಗೆ ಹಸ್ತಾಂತರ: ಹೈಕೋರ್ಟ್ ಸೂಚನೆ

ಪಿಲಿಕುಳ ಮೃಗಾಲಯವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವನ್ಯಜೀವಿಗಳ ರಕ್ಷಣೆ ಬಗ್ಗೆ ಹೈಕೋರ್ಟ್ ನೀಡಿರುವ ಸಂಪೂರ್ಣ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ವಿವಾದ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವ ಧರ್ಮೇಂದ್ರ ಪ್ರಧಾನ್

ನೀಟ್ ಪತ್ರಿಕೆ ಸೋರಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ರಾಜಭವನದಲ್ಲಿ ಸಿದ್ಧತೆ ಜೋರು

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ರಾಜಭವನದಲ್ಲಿ ಸಿದ್ಧತೆ ಶರವೇಗದಲ್ಲಿ ಸಾಗಿದೆ. ಹೈಕಮಾಂಡ್ ಅಂತಿಮ ನಿರ್ಧಾರದ ಕೌತುಕ ಹೆಚ್ಚಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ