ಡಿ. 29:ಜಿಲ್ಲಾ ಬ್ರಾಹ್ಮಣ ಮಹಾಸಭೆಯಿಂದ ಬೈಲೂರು ಮಹಿಷಮರ್ದಿನಿ ದೇಗುಲದಲ್ಲಿ ಕೋಟಿ ಗಾಯತ್ರಿ ಜಪ ಯಜ್ಞ ಕಾರ್ಯಕ್ರಮ

Date:

spot_img

ಉಡುಪಿ, ಡಿ.26: ಜಿಲ್ಲಾ ಬ್ರಾಹ್ಮಣ ಮಹಾಸಭಾ (ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆ ) ವತಿಯಿಂದ ಕೋಟಿ ಗಾಯತ್ರಿ ಜಪ ಯಜ್ಞವು ಡಿ. 29ರಂದು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವಸ್ಥಾನದ ತಂತ್ರಿ ಕೆ.ಎಸ್‌. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿಯವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಕೆ. ವಾಸುದೇವ ಭಟ್ ಬೈಲೂರು, ಪರಿಷತ್ ಬಾಂಧವರ ಸಹಕಾರದೊಂದಿಗೆ ನಡೆಯಲಿದೆ.
ಡಿ. 28ರ ಬೆಳಗ್ಗೆ 8ರಿಂದ ತೋರಣ, ಉಗ್ರಾಣ ಮುಹೂರ್ತ, ದೇವನಾಂದಿ, ಕಲಶಾಭಿಷೇಕ, ಗಣಪತಿ ಹೋಮ, ಕೋಟಿ ಗಾಯತ್ರಿ ಜಪ ಯಜ್ಞದ ಪೂರ್ವಭಾವಿ ಶತಕುಂಡ ರಚನಾದಿ ಸಿದ್ಧತೆ, ಸಂಜೆ 6ಕ್ಕೆ ಅರಣಿ ಮಥನ, ಅಗ್ನಿ ಜನನ, ಕುಂಡ ಸಂಸ್ಕಾರ ಪ್ರಕ್ರಿಯೆ, ಡಿ. 29ರ ಬೆಳಗ್ಗೆ 6ರಿಂದ ಸಂಕಲ್ಪ ಪ್ರಕ್ರಿಯೆ, ಆಚಾರ್ಯಾದಿಋತ್ವಿಕ್ವರ್ಣಿ ಶತಕುಂಡದಲ್ಲಿ ಕೋಟಿ ಜಪಯಜ್ಞ ಪ್ರಾರಂಭ, 9ಕ್ಕೆ ಕೋಟಿ ಜಪ ಯಜ್ಞಪೂರ್ಣಹುತ್ರಿ 9.30ಕ್ಕೆಶ್ರೀ ಚಂಡಿಕಾಯಾಗ ಪೂರ್ಣಹುತಿ, 11.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಅಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಸಭೆಯಲ್ಲಿ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀ ವಿದ್ವೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಹಾಸಭಾ ಅಧ್ಯಕ್ಷ ಸಂದೀಪ್‌ ಕುಮಾರ್ ಮಂಜ ಅಧ್ಯಕ್ಷತೆ ವಹಿಸುವರು, ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಪಾರಂಪಾರಿಕ ಆರ್ಚಕ ಹರಿನಾರಾಯಣದಾಸ ಆಸ್ರಣ್ಣ ಕುಂದಾಪುರ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಯು. ರಾಜೇಶ್ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಬಿ.ಎಸ್. ರಾಘವೇಂದ್ರ ಭಟ್, ಕೃಷ್ಣಾನಂದ ಚಾತ್ರ, ಬೆಂಗಳೂರು ವಿಪ್ರತ್ರಯಿ ಪರಿಷತ್‌ ಅಧ್ಯಕ್ಷ ಎಸ್‌.ರಘುನಾಥ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ಅಧ್ಯಕ್ಷ ಕಾಂತಿ ರಾವ್ ಭಾಗವಹಿಸಲಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.