
ಉಡುಪಿ, ಡಿ.26: ಜಿಲ್ಲಾ ಬ್ರಾಹ್ಮಣ ಮಹಾಸಭಾ (ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆ ) ವತಿಯಿಂದ ಕೋಟಿ ಗಾಯತ್ರಿ ಜಪ ಯಜ್ಞವು ಡಿ. 29ರಂದು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವಸ್ಥಾನದ ತಂತ್ರಿ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿಯವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಕೆ. ವಾಸುದೇವ ಭಟ್ ಬೈಲೂರು, ಪರಿಷತ್ ಬಾಂಧವರ ಸಹಕಾರದೊಂದಿಗೆ ನಡೆಯಲಿದೆ.
ಡಿ. 28ರ ಬೆಳಗ್ಗೆ 8ರಿಂದ ತೋರಣ, ಉಗ್ರಾಣ ಮುಹೂರ್ತ, ದೇವನಾಂದಿ, ಕಲಶಾಭಿಷೇಕ, ಗಣಪತಿ ಹೋಮ, ಕೋಟಿ ಗಾಯತ್ರಿ ಜಪ ಯಜ್ಞದ ಪೂರ್ವಭಾವಿ ಶತಕುಂಡ ರಚನಾದಿ ಸಿದ್ಧತೆ, ಸಂಜೆ 6ಕ್ಕೆ ಅರಣಿ ಮಥನ, ಅಗ್ನಿ ಜನನ, ಕುಂಡ ಸಂಸ್ಕಾರ ಪ್ರಕ್ರಿಯೆ, ಡಿ. 29ರ ಬೆಳಗ್ಗೆ 6ರಿಂದ ಸಂಕಲ್ಪ ಪ್ರಕ್ರಿಯೆ, ಆಚಾರ್ಯಾದಿಋತ್ವಿಕ್ವರ್ಣಿ ಶತಕುಂಡದಲ್ಲಿ ಕೋಟಿ ಜಪಯಜ್ಞ ಪ್ರಾರಂಭ, 9ಕ್ಕೆ ಕೋಟಿ ಜಪ ಯಜ್ಞಪೂರ್ಣಹುತ್ರಿ 9.30ಕ್ಕೆಶ್ರೀ ಚಂಡಿಕಾಯಾಗ ಪೂರ್ಣಹುತಿ, 11.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಅಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಸಭೆಯಲ್ಲಿ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಚಿತ್ರಾಪುರ ಮಠದ ಶ್ರೀ ವಿದ್ವೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಅಧ್ಯಕ್ಷತೆ ವಹಿಸುವರು, ಅಷ್ಟಾವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಪಾರಂಪಾರಿಕ ಆರ್ಚಕ ಹರಿನಾರಾಯಣದಾಸ ಆಸ್ರಣ್ಣ ಕುಂದಾಪುರ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಯು. ರಾಜೇಶ್ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಬಿ.ಎಸ್. ರಾಘವೇಂದ್ರ ಭಟ್, ಕೃಷ್ಣಾನಂದ ಚಾತ್ರ, ಬೆಂಗಳೂರು ವಿಪ್ರತ್ರಯಿ ಪರಿಷತ್ ಅಧ್ಯಕ್ಷ ಎಸ್.ರಘುನಾಥ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ಅಧ್ಯಕ್ಷ ಕಾಂತಿ ರಾವ್ ಭಾಗವಹಿಸಲಿದ್ದಾರೆ.