spot_img

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ :ವಿದ್ಯಾರ್ಥಿ ಸಂಸತ್ ಉದ್ಘಾಟನೆ

Date:

spot_img

ಹಿರಿಯಡಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯಲ್ಲಿ2025-26 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಯವರಾದ ಪರಮೇಶ್ವರ್ ಎ. ಹೆಗ್ಡೆ ಯವರು ಉದ್ಘಾಟಿಸಿ ಮಾತನಾಡುತ್ತಾ ನಾಯಕತ್ವ, ಶಿಸ್ತು ಮತ್ತು ಬದ್ದತೆಯನ್ನು ಕಲಿಯಲು ವಿದ್ಯಾರ್ಥಿ ಸಂಸತ್ ಒಂದು ಉತ್ತಮ ವೇದಿಕೆ, ಈ ಮೂಲಕ ವ್ಯಕ್ತಿತ್ವ ವಿಕಸನವನ್ನು ಬೆಳೆಸಿಕೊಂಡರೆ ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಕಾಲಮಾನದಲ್ಲಿ ನಾವು ಗಮನಿಸಬೇಕಾದ ವಿಚಾರವೇನೆಂದರೆ ಬಹಳಷ್ಟು ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯದೆ ತಮ್ಮ ಜೀವನವನ್ನು ತಾವೇ ವ್ಯರ್ಥ ಗೊಳಿಸುತ್ತಿದ್ದಾರೆ. ಇಂದು ಈ ಸಂಸತ್ ನಲ್ಲಿ ನಾನು ಗಮನಿಸಿದ್ದೇನೆಂದರೆ ಮಿನಿಸ್ಟರ್ ಆಪ್ ಹ್ಯಾಪಿನೆಸ್ ಎನ್ನುವ ಹುದ್ದೆಯನ್ನು ಕೂಡ ಸೃಷ್ಟಿಸಿ ಹೊಸತನವನ್ನು ಮೆರೆದಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಭಾರತೀಯ ಸೇನೆಯ ನಿವೃತ್ತ ಯೋಧರಾದ ಉಪೇಂದ್ರ ವಾಗ್ಲೆ ಯವರು ಅತಿಥಿಗಳಾಗಿ ಭಾಗವಹಿಸಿದ್ದು ವಿದ್ಯಾರ್ಥಿಗಳಿಗೆ ಬ್ಯಾಜ್ ತೊಡಿಸಿದರು.

ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಖೋಲಸ್ ರವರು ಸಂಸತ್ ನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಶಾಲಾ ವಿದ್ಯಾರ್ಥಿನಿ ಧನುಶ್ರೀ ಸ್ವಾಗತಿಸಿ, ಉತ್ತಮ್ ಮತ್ತು ಸಾನ್ವಿ ಶೆಟ್ಟಿಗಾರ್ ರವರು ಪರಿಚಯಿಸಿ, ದೇವಿಕಾ ವಾಗ್ಲೆ ಮತ್ತು ಆಗಮ್ ಶೆಟ್ಟಿ ನಿರೂಪಿಸಿ, ಅಭಿನವ್ ಪ್ರಸನ್ನ ವಂದಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲೆ ಜಯಶ್ರೀ ತೆಂಡೂಲ್ಕರ್, ಆಡಳಿತಾಧಿಕಾರಿ ಶೇಕರ್ ಗುಜ್ಜರ್ ಬೆಟ್ಟು, ವ್ಯವಸ್ಥಾಪಕಿ ಅಮಿತಾ ಹೆಗ್ಡೆ, ಸಂಯೋಜಕರಾದ ಉಷಾ ರಾವ್, ಗೀತಾ ಭಟ್ ಮುಂತಾದವರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹ

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹಿಸಿದ್ದಾರೆ.

ರೋಬೋಟ್‌ನಿಂದಲೇ ಮಗುವಿನ ಜನನ: ಜಗತ್ತಿನ ಮೊದಲ ಕೃತಕ ಗರ್ಭಧಾರಣೆಗೆ ಚೀನಾ ಸಿದ್ಧತೆ

ಭವಿಷ್ಯದಲ್ಲಿ ಹೆರಿಗೆಗೆ ಮಹಿಳೆಯರ ಅಗತ್ಯ ಇರಲಿಕ್ಕಿಲ್ಲ. ಯಾಕೆಂದರೆ, ಹ್ಯೂಮನಾಯ್ಡ್ ರೋಬೋಟ್‌ಗಳು ಮಾನವ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.

ಕೃಷ್ಣರಾಜ ಹೆಗ್ಡೆ ಕೌಡೂರು ( ತಮ್ಮಣ್ಣ) ದೈವಾಧೀನ – ನಾಳೆ ಬೈಲೂರಿನಲ್ಲಿ ಅಂತಿಮ ದರ್ಶನ

ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದ ಕೌಡೂರಿನ ಶ್ರೀ ಕೃಷ್ಣರಾಜ ಹೆಗ್ಡೆ ರವರು ಇಂದು ದೈವಾಧೀನರಾಗಿದ್ದಾರೆ.

ರೈತರೇ ಎಚ್ಚರ ! ಅತಿಯಾದ ಯೂರಿಯಾ ಗೊಬ್ಬರ ಕೃಷಿಗೆ ಶಾಪ: ಬಂಜರಾಗುವ ಭೂಮಿ , ಆರೋಗ್ಯಕ್ಕೆ ಕುತ್ತು

ರೈತರಿಗೆ ಸುಲಭವಾಗಿ ಲಭ್ಯವಿರುವ ಮತ್ತು ಬೆಳೆಗಳ ಬೆಳವಣಿಗೆಗೆ ಶೀಘ್ರ ಫಲಿತಾಂಶ ನೀಡುತ್ತದೆ ಎಂದು ನಂಬಿರುವ ಯೂರಿಯಾ ರಾಸಾಯನಿಕ ಗೊಬ್ಬರವು ಇಂದು ರೈತ ಸಮುದಾಯ ಮತ್ತು ಭೂಮಿಯ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ.