
ಕಾರ್ಕಳ : ಸೆಪ್ಟೆಂಬರ್ 6ರಂದು ಉಡುಪಿ ಅಮೃತ ಗಾರ್ಡನ್ ನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಸ್ಪರ್ಧಾಕೂಟದಲ್ಲಿ ಕುಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ (ರಿ.) ನಚಿಕೇತ ವಿದ್ಯಾಲಯದ ವಿದ್ಯಾರ್ಥಿಗಳಾದ ವರ್ಷಿತ್ ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕ , ನಿರೂಷ ಕಟಾ ವಿಭಾಗದಲ್ಲಿ ಬೆಳ್ಳಿ ಹಾಗೂ ಕುಮಿಟೆಯಲ್ಲಿ ಬ್ರೌನ್ಸ್ ಮೆಡಲ್ ಮತ್ತು ಮನ್ವಿತ್ ಇವರು ಕಟಾದಲ್ಲಿ ಬ್ರೌನ್ಸ್ ಮತ್ತು ಕುಮಿಟೆ ವಿಭಾಗದಲ್ಲಿ ಬ್ರೌನ್ಸ್ ಮೆಡಲ್ ಪಡೆದು 1 ಚಿನ್ನ 2 ಬೆಳ್ಳಿ ಹಾಗೂ 3 ಕಂಚಿನ ಪದಕ ಪಡೆದುಕೊಂಡಿರುತ್ತಾರೆ. ಇವರು ಶಾಲಾ ಕರಾಟೆ ಶಿಕ್ಷಕರಾದ ರೆನ್ಸಿ ಸೋಮನಾಥ ಮತ್ತು ಸೆನ್ಸಾಯಿ ಡಾ| ವಿಜಯಲಕ್ಷ್ಮಿ ಆರ್ ನಾಯಕ್ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
ಇವರಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಿಕಾ, ಶಿಕ್ಷಕರಾದ ಅಕ್ಷತಾ ಹಾಗೂ ಶಾಲಾ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.