
2025 – 26ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ವಿದ್ಯಾರ್ಥಿನಿಯಾಗಿರುವ ಕುಮಾರಿ ಅನನ್ಯರವರು ಶೇಕಡ 99.04%(619) ಅಂಕಗಳನ್ನು ಪಡೆದಿರುತ್ತಾರೆ.
ದಯಾನಂದ ನಾಯಕ್ ಮತ್ತು ದಿವ್ಯ ನಾಯಕ್ ದಂಪತಿಗಳ ಪುತ್ರಿಯಾಗಿರುವ ಅನನ್ಯರವರ ಊರು ಬೆಳ್ಳಾರ್ಪಾಡಿ ಆಗಿದ್ದು , ಈ ಗ್ರಾಮದಲ್ಲಿ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಸುಮಾರು 6 km ಶಾಲೆಯಿಂದ ಮನೆಗೆ ನಡೆದುಕೊಂಡೆ ಬರುತ್ತಿದ್ದರು. ಇಂತಹ ಸಮಯದಲ್ಲೂ 619 ಅಂಕಗಳನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಪಡುವಂತಹ ವಿಷಯವಾಗಿದೆ.
ಮೊದಲಿನಿಂದಲೂ ಕಲಿಕೆಯಲ್ಲಿ ಬಹಳ ಚುರುಕಾಗಿದ್ದು ಎಂಟನೇ ತರಗತಿಯಲ್ಲಿ ನಡೆದಂತಹ ಅತ್ಯಂತ ಕಠಿಣ ಪರೀಕ್ಷೆಯಾದ National Means-cum Merit Scholarship (NMMS )ನಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಲ್ಲದೆ ರಾಮಾಯಣ ಮಹಾಭಾರತದಂತಹ ಪರೀಕ್ಷೆಗಳಲ್ಲೂ 100 ರಲ್ಲಿ 97 ಅಂಕಗಳನ್ನು ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಸ.ಹಿ.ಪ್ರ ಶಾಲೆ ಬೆಳ್ಳಾರ್ಪಾಡಿ ಎಂಬಲ್ಲಿ ಮುಗಿಸಿದ್ದು ಅಲ್ಲಿಯೂ ಕಲಿಕೆಯ ವಿಷಯ ಮಾತ್ರವಲ್ಲದೆ ಹಲವು ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಬಹುಮಾನಗಳನ್ನು ಪಡೆದು ಸರಿ ಸುಮಾರು 20 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಮುಂದೆಯೂ ಕೂಡ ಇದೇ ರೀತಿ ಪೋಷಕರಿಗೆ,ಊರಿಗೆ ಹಾಗೂ ಸಮಾಜಕ್ಕೆ ಒಳ್ಳೆ ಹೆಸರನ್ನು ತರುವಂತಾಗಲಿ ಎಂದು ಆಶಿಸೋಣ.