
ಉಡುಪಿ ಜು.22: ಮತಿ ಭ್ರಮಣೆ ಗೊಂಡ ಅಪರಿಚಿತ ವ್ಯಕ್ತಿಯೋರ್ವ ಸಾರ್ವಜನಿಕರ ಮನೆಗೆ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸ್ ಸಹಾಯದಿಂದ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿ ಸೋಮಪ್ಪ (55) ಹೊರ ಜಿಲ್ಲೆಯವನಾಗಿದ್ದು ಹೆಚ್ಚಿನ ವಿವರ ದೊರೆತಿಲ್ಲ.
ರಕ್ಷಣಾ ಕಾರ್ಯದಲ್ಲಿ ASI ರಾಮು ಹೆಗ್ಡೆ ಸಹಕರಿಸಿದ್ದಾರೆ.
ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಅಥವಾ ಬೈಂದೂರು ಪೊಲೀಸ್ ಸ್ಟೇಷನ್ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
