spot_img

ಉಡುಪಿ: ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವಿಧಾನ ಅನುಸರಿಸಿ, ರಸ್ತೆ ಬದಿ ತ್ಯಾಜ್ಯ ಎಸೆದರೆ ದಂಡ!

Date:

spot_img

ಉಡುಪಿ: ಉಡುಪಿ ನಗರಸಭೆಯು ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ನಗರದ 35 ವಾರ್ಡ್‌ಗಳಲ್ಲಿನ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳು, ತೆಂಗಿನ ಮಡಲು, ಗಿಡಗಂಟಿ ಮತ್ತು ಗಾರ್ಡನ್ ತ್ಯಾಜ್ಯಗಳನ್ನು ರಸ್ತೆ ಬದಿಗೆ, ಮಳೆ ನೀರು ಹರಿಯುವ ತೋಡು ಅಥವಾ ಚರಂಡಿಗೆ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ನಗರಸಭೆ ತಿಳಿಸಿದೆ.

ಈ ರೀತಿಯ ಅಕ್ರಮ ತ್ಯಾಜ್ಯ ವಿಲೇವಾರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದ್ದು, ರಸ್ತೆ ಬದಿಗೆ ಹಾಕಿರುವ ತೆಂಗಿನ ಮಡಲುಗಳಿಂದ ಘನತ್ಯಾಜ್ಯ ವಿಲೇವಾರಿಗೂ ಅಡ್ಡಿಯಾಗುತ್ತಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ತೆಂಗಿನ ಮಡಲು ಮತ್ತು ಇತರೆ ತ್ಯಾಜ್ಯವನ್ನು ಎಸೆಯುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ನಗರಸಭೆ ಎಚ್ಚರಿಸಿದೆ. ಆದ್ದರಿಂದ, ನಾಗರಿಕರು ಮೇಲ್ಕಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ಉದ್ಯಮಿಗಳ ದಿನ

ವಿಶ್ವ ಉದ್ಯಮಿಗಳ ದಿನವನ್ನು ಪ್ರತಿ ವರ್ಷ ಆಗಸ್ಟ್ 21 ರಂದು ಆಚರಿಸಲಾಗುತ್ತದೆ

ಸ್ಟಾರ್ಲಿಂಕ್‌ಗೆ Aadhaar e-KYC ಅನುಮತಿ: UIDAI ಜೊತೆಗೆ ಒಪ್ಪಂದಕ್ಕೆ ಸಹಿ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಸ್ಯಾಟಲೈಟ್ ಇಂಟರ್ನೆಟ್ ಸೇವಾ ಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಉಡುಪಿ, ದ.ಕ.ಗೆ ಆತಂಕಕಾರಿ ಸ್ಥಾನ: ಕರಾವಳಿ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ನಾಪತ್ತೆ

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 14,000ಕ್ಕೂ ಹೆಚ್ಚು ಮಕ್ಕಳು ಅಪಹರಣಕ್ಕೊಳಗಾಗಿದ್ದು, ಈ ಪೈಕಿ 1,336 ಮಕ್ಕಳ ಪ್ರಕರಣಗಳು ಇನ್ನೂ ನಿಗೂಢವಾಗಿ ಉಳಿದಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಎಮ್ಮೆ ಖರೀದಿಸಲು ಹೋಗಿ 4.5 ಲಕ್ಷ ರೂ. ಕಳೆದುಕೊಂಡ ನಿರ್ದೇಶಕ ಪ್ರೇಮ್: ವಂಚಕನ ವಿರುದ್ಧ ದೂರು

ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್ ಅವರು ಎಮ್ಮೆ ಖರೀದಿಸಲು ಹೋಗಿ ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಾರೆ.