
ಉಡುಪಿ: ಉಡುಪಿ ಡಿಸ್ಟಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ (ರಿ.) ಉಡುಪಿ ಇದರ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿ. 07/09/2025 ರಂದು ಉಡುಪಿ, ಉದ್ಯಾವರ, ಬಲಾಯಿಪಾದೆ, ನಿತ್ಯಾನಂದ ಆರ್ಕೇಡ್ ಸಭಾಭವನದಲ್ಲಿ ಜರಗಿದ್ದು, ಶ್ರೀಯುತ ಸಂತೋಷ್ ಕುಮಾರ್ ಮೂಡಬಿದ್ರಿಯವರು 2025-27 ಸಾಲಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷರಾಗಿ ಶ್ರೀಯುತ ದಾಮೋದರಪೈ, ಕುಂದಾಪುರ ಶ್ರೀಯುತ ಅಕ್ಬರ್ ಎಸ್. ಕೆ ಕಟಪಾಡಿ, ಶ್ರೀಯುತ ಶ್ರೀನಿವಾಸ ಕುಂದರ್ ಕೋಟೇಶ್ವರ, ಪ್ರಧಾನಕಾರ್ಯದರ್ಶಿಯಾಗಿ ಶ್ರೀಯುತ ಸುನೀಲ್ ಓಂತಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಯುತ ಸುನೀಲ್ ಕುಮಾರ್ ಬ್ರಹ್ಮಾವರ, ಕೋಶಾಧಿಕಾರಿಯಾಗಿ ಶ್ರೀಯುತ ಅಶೋಕ್ ಶೆಟ್ಟಿಗಾರ್ ಕಾರ್ಕಳ, ಮಾಧ್ಯಮ ಸಲಹೆಗಾರರಾಗಿ ಶ್ರೀಯುತ ಹಮೀದ್ ಪಡುಬಿದ್ರಿ, ಉಪಾಧ್ಯಕ್ಷರುಗಳಾಗಿ ಶ್ರೀಯುತ ಅನಿಲ್ ಶೆಟ್ಟಿ ಕಾಜಾರಗುತ್ತು, ಶ್ರೀಯುತ ಆನಂದ ನಾಯ್ಡು ಭಟ್ಕಳ, ಶ್ರೀಯುತ ಮಧುಸೂಧನ್ ಮಲ್ಪೆ, ಶ್ರೀಯುತ ಪ್ರಕಾಶ್ ಹಂದಟ್ಟು, ಸಲಹಾಸಮಿತಿ ಸದಸ್ಯರುಗಳಾಗಿ ಶ್ರೀಯುತ ಬೇಳಂಜೆ ಹರೀಶ್ ಪೂಜಾರಿ, ಶ್ರೀಯುತ ಎಂ ಕೆ ದಿನೇಶ್ ಮೂಡಬಿದ್ರಿ, ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಆಯ್ಕೆಯಾಗಿರುತ್ತಾರೆ.