spot_img

ಉಡುಪಿ ಜಿಲ್ಲಾ ಆಸ್ಪತ್ರೆ ಕಟ್ಟಡ ಕಾಮಗಾರಿ ಸ್ಥಗಿತ: 40 ಕೋಟಿ ಅನುದಾನ ಬಿಡುಗಡೆಗೆ ಸಚಿವರಿಗೆ ಮನವಿ

Date:

ಉಡುಪಿ, ಏಪ್ರಿಲ್ 8 : ಉಡುಪಿ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಅನುದಾನ ಕೊರತೆಯಿಂದಾಗಿ ಸ್ಥಗಿತಗೊಂಡಿರುವ ವಿಷಯಕ್ಕೆ ಇದೀಗ ಮತ್ತೊಮ್ಮೆ ಚಾಲನೆ ಮೂಡಿದೆ.

ಡಾ. ಪಿ ವಿ ಭಂಡಾರಿ ಅವರ ಮಾರ್ಗದರ್ಶನದಲ್ಲಿ KYC ಉಡುಪಿ ಹಾಗೂ ಇತರ ಸಂಘ-ಸಂಸ್ಥೆಗಳ ಸಮೂಹ ಹೋರಾಟದ ಫಲವಾಗಿ, ಹಿಂದಿನ ಸರ್ಕಾರ 150 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಅದರಂತೆ ಕಟ್ಟಡ ಕಾಮಗಾರಿ ಪ್ರಾರಂಭವಾದರೂ, ಇದೀಗ 40 ಕೋಟಿ ರೂ. ಅನುದಾನದ ಕೊರತೆಯಿಂದ ಕಾಮಗಾರಿ ಅಪೂರ್ಣವಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ KYC ಉಡುಪಿ ಸದಸ್ಯರು, ಕಾಮಗಾರಿಗಾಗಿ ತಕ್ಷಣ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದರು.

ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಚಿವರು, ವಿಶೇಷ ಮನವಿಯೊಂದಿಗಾಗಿ ಮರುಭೇಟಿಗೆ ಆಹ್ವಾನ ನೀಡಿದ್ದು, ಸಂಬಂಧಿತ ಕಡತ ಪರಿಶೀಲನೆಯ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭ ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೀಘ್ರದಲ್ಲೇ ಅನುದಾನ ಬಿಡುಗಡೆ ಮೂಲಕ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಆಸ್ಪತ್ರೆ ಲಭ್ಯವಾಗುವ ನಿರೀಕ್ಷೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ರೆಡ್ ಕ್ರಾಸ್ ದಿನ

ವಿಶ್ವದ ಶಾಂತಿಗಾಗಿ ವಿಶ್ವದ ಆರೋಗ್ಯಕ್ಕಾಗಿ ಮೇ 8ರಂದು ಜಗತ್ತಿನಾದ್ಯಂತ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲ್ಪಡುತ್ತಿದೆ.ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ಜನಕನಾದ ಹೆನ್ರಿ ಡ್ಯೂನಾಂಟ್ ಎನ್ನುವವರ ಜನ್ಮದಿನವಾದ ಕಾರಣದಿಂದ ಈ ದಿನವನ್ನು ಅದರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.

ಆರೋಗ್ಯದಿಂದ ನಿದ್ರೆವರೆಗೆ: ಗಸಗಸೆ ಬೀಜಗಳ ಅಪರೂಪದ ಗುಣಗಳು!

ಭಾರತೀಯ ಮನೆಮದ್ದುಗಳಲ್ಲಿ ಪ್ರಮುಖವಾಗಿ ಬಳಸುವ ಗಸಗಸೆ ಬೀಜಗಳು ಈಗ ಪುನಃ ಗಮನ ಸೆಳೆಯುತ್ತಿವೆ. ಬಲವಾದ ಆರೋಗ್ಯ, ಉತ್ತಮ ನಿದ್ರೆ, ಜೀರ್ಣಕ್ರಿಯೆ ಸುಧಾರಣೆ, ನೋವಿನ ನಿವಾರಣೆ ಇತ್ಯಾದಿಗಳಲ್ಲಿ ಈ ಪುಟ್ಟ ಬೀಜಗಳ ಮಹತ್ವ ಅಪಾರವಾಗಿದೆ.

ಪಹಲ್ಗಾಮ್ ಉಗ್ರ ದಾಳಿ ನಂತರ ರಾಜ್ಯದಲ್ಲಿ ಭದ್ರತಾ ತೀವ್ರತೆ: ಗುಪ್ತಚರ ಇಲಾಖೆ ಎಚ್ಚರಿಕೆ ಸೂಚನೆ

ಯುದ್ಧದ ಭೀತಿ ಹೆಚ್ಚಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ರಾಜ್ಯಾದ್ಯಂತ ಭದ್ರತೆಯ ಮಟ್ಟ ಹೆಚ್ಚಿಸಲು ತುರ್ತು ಸೂಚನೆ ನೀಡಿದೆ.

ಇಂಧನ ಕೊರತೆ ಇಲ್ಲ , ಜನರಲ್ಲಿ ಭೀತಿ ಬೇಡ ! ಎಂದು ಸ್ಪಷ್ಟನೆ ನೀಡಿದ ಇಂಡಿಯನ್ ಆಯಿಲ್

ಗಡಿ ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಸಾಲು ಕಟ್ಟಿರುವ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ, ಇಂಡಿಯನ್ ಆಯಿಲ್ ಕಾರ್ಪೊರೇಶನ್ “ಇಂಧನ ಬೇಕಾದಷ್ಟಿದೆ , ಆತಂಕ ಬೇಡ!” ಎಂದು ಸ್ಪಷ್ಟನೆ ನೀಡಿದೆ.