
ಉಡುಪಿ : ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಅಧ್ಯಕ್ಷರಾದ ಶ್ರೀಯುತ ಎಮ್ ಕೆ ದಿನೇಶ್ ಮೂಡಬಿದ್ರಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುದರ ಮುಖೇನ ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿಯವರಾದ ಶ್ರೀಯುತ ಗಿರೀಶ್ ಮಲ್ಪೆಯವರು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ ಗೌರವಾಧ್ಯಕ್ಷರಾದ ಶ್ರೀಯುತ ದಾಮೋದರ ಪೈ ಕುಂದಾಪುರರವರು ಮಹಾಸಭೆಯ ಪ್ರಾಮುಖ್ಯತೆಯ ಹಾಗೂ ಸಂಘಟನೆಯ ಬಗ್ಗೆ ವಿವರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಗಿರೀಶ್ ಮೖಂದನ್ ಮಲ್ಪೆ ವರದಿವಾಚನ ಮಾಡಿದರು.ಸಂಘಟನಾ ಕಾರ್ಯದರ್ಶಿಯವರಾದ ಶ್ರೀಯುತ ಸುನೀಲ್ ಕುಮಾರ್ ಬ್ರಹ್ಮಾವರರವರು ಲೆಕ್ಕಪತ್ರ ಮಂಡನೆ ಮಾಡಿದರು.
ಭಾರತಮಾತೆಗೆ ಪುಷ್ಪಾರ್ಚನೆ ಮಾಡುತ್ತಾ, ಸಂಘದ ಸದಸ್ಯರ ಜೊತೆಗೆ ಸಹಮಾಲಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಸುಜಾತಾ ಹರೀಶ್ ಹೆಬ್ರಿ, ಶ್ರೀಮತಿ ಶುಭ ದಾಮೋದರ ಪೈ ಕುಂದಾಪುರ, ಶ್ರೀಮತಿ ವೀಣಾ ಸಂತೋಷ್ ಮೂಡಬಿದ್ರಿ, ಶ್ರೀಮತಿ ಅನಿತಾ ಗಿರೀಶ್ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. ಸಂಘದ ಯುನಿಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸೖನರ್ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀಯುತ ಸಂಜಯ್ ಕುಂದಾಪುರ, ಶ್ರೀಯುತ ರಾಕೇಶ್ ಸುವರ್ಣ ಬೊಳ್ಜೆ, ಶ್ರೀಯುತ ಶಶಿಕಾಂತ ಶೆಟ್ಟಿ ಕಡೆಕಾರ್ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು.ಅನಾರೋಗ್ಯಕ್ಕೆ ಓಳಪಟ್ಟ ಶ್ರೀಯುತ ರಾಘವೇಂದ್ರ ಉಡುಪಿಯವರಿಗೆ ರೂ. 25000/.ನೀಡಲಾಯಿತು.
ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ಕುಂದರ್ ಕೋಟೇಶ್ವರ, ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಶನ್ ರಿ. ಉಡುಪಿ ಇದರ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಉಪಸ್ಥಿತರಿದ್ದರು. 2025-27 ನೇ ಸಾಲಿನ ಅಧ್ಯಕ್ಷರಾಗಿ ಶ್ರೀಯುತ ಸಂತೋಷ್ ಕುಮಾರ್ ಮೂಡಬಿದ್ರಿ ನೇತ್ರತ್ವದಲ್ಲಿ 15 ಸದಸ್ಯರ ತಂಡವನ್ನು ರಚಿಸಲಾಯಿತು.
ಶ್ರೀಯುತ ಪ್ರಸನ್ನ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಯುತ ಗಿರೀಶ್ ಧನ್ಯವಾದವನ್ನು ತಿಳಿಸಿದರು.