
ಉಡುಪಿ: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ) ಇದರ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಹಮ್ಮಿಕೊಳ್ಳಲಾದ ವಿಶೇಷ ಸನ್ಮಾನ ಕಾರ್ಯಕ್ರಮವು ನಗರದ ಮಥುರಾ ಕನ್ಫರ್ಟ್ಸ್ ಸಭಾಂಗಣದಲ್ಲಿ ವೈಭವದಿಂದ ಜರುಗಿತು. ಸಮಾಜದ ಪ್ರಮುಖರು ಹಾಗೂ ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಈ ವಾರ್ಷಿಕ ಸಭೆಯು ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕುಂದಾಪುರ ತಾಲೂಕಿನ ಶಂಕರ್ ರಾವ್ ಕಾಳವರ, ಕಾರ್ಕಳ ತಾಲೂಕಿನ ವಿಶ್ವನಾಥ್ ಭಟ್ ಕೌಡೂರು ಹಾಗೂ ಮೈಸೂರಿನ ‘ಕಲಿಯುಗದ ಶ್ರವಣ ಕುಮಾರ’ ಎಂದೇ ಖ್ಯಾತಿ ಪಡೆದಿರುವ ಕೃಷ್ಣ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಸಂದೀಪ್ ಮಂಜ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ , ರಾಜ್ಯ ಉಪಾಧ್ಯಕ್ಷರಾದ ಕೃಷ್ಣಾನಂದ ಛಾತ್ರ ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ವೈ ಸುಧಾಕರ್ ಭಟ್ ಕಾರ್ಕಳ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ಗಣೇಶ್ ರಾವ್ ಕುಂಭಾಸಿ ವರದಿ ವಾಚನ ಮಾಡಿದರು ,ಮಾಧವ ಭಟ್ ಕಾರ್ಕಳ ಆಯವ್ಯಯ ಮಂಡಿಸಿದರು.

ಸಭೆಯಲ್ಲಿ ಮಹಿಳಾ ಅಧ್ಯಕ್ಷೆ ಕಾಂತಿ ರಾವ್,ಯುವ ವಿಪ್ರವೇದಿಕೆಯ ಅಧ್ಯಕ್ಷೆ ಪವಿತ್ರ ಅಡಿಗ, ತಾಲೂಕಿನ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಜಯರಾಮ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.



































