
ಉಡುಪಿ ತಾಲೂಕಿನ ಪೆರ್ಡೂರು ಹತ್ತಬೈಲು ದರ್ಖಾಸಿನ ಲತಾ ಮೊಗವೀರ ಅವರ ಪುತ್ರಿ ರಕ್ಷಿತಾ (21) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಕಲಾ ವಿಭಾಗದಲ್ಲಿ ಓದುತ್ತಿದ್ದ ರಕ್ಷಿತಾ, ಪೆರಂಪಳ್ಳಿಯ ಎನ್.ಎಸ್.ಎಸ್. ಕ್ಯಾಂಪ್‌ನಲ್ಲಿ ಇದ್ದಾಗ ತಲೆಯ ನರದ ರಕ್ತಸ್ರಾವದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾದರು.