spot_img

ಉಡುಪಿ: ಅತಿವೇಗದಿಂದ ಬಸ್ ಚಲಾಯಿಸಿದ ಚಾಲಕನ ಬಂಧನ – ಬಸ್ಸು ವಶಕ್ಕೆ

Date:

spot_img

ಉಡುಪಿ : ಉಡುಪಿ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಖಾಸಗಿ ಬಸ್ಸು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಶ್ರೀ ದುರ್ಗಾಂಬ ಖಾಸಗಿ ಬಸ್‌ ಒಂದನ್ನು ದೇವರಾಜ್ ಎಂಬ ಚಾಲಕ ಕರಾವಳಿ ಬೈಪಾಸ್ ಕಡೆಯಿಂದ ಉಡುಪಿಗೆ ಅತೀವೇಗವಾಗಿ ಚಲಾಯಿಸುತ್ತಿದ್ದ. ವೇಗ ನಿಯಂತ್ರಣ ತಪ್ಪಿದ ಪರಿಣಾಮ, ಬಸ್ ರಸ್ತೆಯ ಮಧ್ಯೆ ತಿರುಗಿ ನಿಂತು ಸಂಚಾರಕ್ಕೆ ತೊಂದರೆ ಉಂಟುಮಾಡಿತು. ಬಳಿಕ ಚಾಲಕನು ತಕ್ಷಣವೇ ಬಸ್ಸುಗಳನ್ನು ನಿಷಿದ್ಧ ದಿಕ್ಕಿನಲ್ಲಿ ಚಲಾಯಿಸಿ, ಉಡುಪಿಯತ್ತ ಸಾಗಿದ್ದಾನೆ.

ಬಸ್ಸಿನಲ್ಲಿ ಇದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುವುದು ಸನಾಧಾನದ ವಿಷಯ. ಈ ದೃಶ್ಯವು ಸ್ಥಳೀಯರಿಂದ ಚಿತ್ರೀಕರಿಸಲ್ಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವೀಡಿಯೊ ಆಧರಿಸಿ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿತ ಚಾಲಕ ದೇವರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಪ್ರಯಾಣಿಕರ ಜೀವ ಅಪಾಯಕ್ಕೆ ಕಾರಣವಾಗಬಹುದಾದ ಬಸ್ಸನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪೊಲೀಸರು ಇದೀಗ ಚಾಲಕನ ಡ್ರೈವಿಂಗ್ ಇತಿಹಾಸ ಹಾಗೂ ಘಟನೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಕೈಮಗ್ಗ ದಿನ

ಈ ದಿನವು ಭಾರತೀಯ ಕೈಮಗ್ಗ ನೇಕಾರರ ಶ್ರಮ ಮತ್ತು ಕೌಶಲ್ಯವನ್ನು ಸ್ಮರಿಸುವ ಒಂದು ಅವಕಾಶವಾಗಿದೆ. ಕೈಮಗ್ಗ ಕ್ಷೇತ್ರವು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಇದು ನೆನಪಿಸುತ್ತದೆ.

ಟಾಟಾ ಹ್ಯಾರಿಯರ್ ಮತ್ತು ಸಫಾರಿ Adventure X ಬಿಡುಗಡೆ: ₹18.99 ಲಕ್ಷಕ್ಕೆ ಹೊಸ ಅವತಾರದಲ್ಲಿ ಬಲಿಷ್ಠ SUV!

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಸ್‌ಯುವಿ ಮಾದರಿಗಳಾದ Harrier ಮತ್ತು Safariಯ ಹೊಸ Adventure X ಎಡಿಷನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಕಾಲ್ ಗರ್ಲ್ ಸೇವೆ ಆಮಿಷಕ್ಕೆ ಬಲಿಯಾದ ಬೆಂಗಳೂರು ಟೆಕ್ಕಿ; ₹1.5 ಲಕ್ಷ ಕಳೆದುಕೊಂಡು ದೂರು!

ಆನ್‌ಲೈನ್‌ನಲ್ಲಿ ಕಾಲ್ ಗರ್ಲ್ ಸೇವೆ ಪಡೆಯಲು ಹೋಗಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 1.49 ಲಕ್ಷ ರೂ. ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೊಸ ಅವತಾರದಲ್ಲಿ ಮಿಂಚಿದ ರಮ್ಯಾ: ಸಖತ್ ಗ್ಲಾಮರಸ್ ಫೋಟೋಗಳು ವೈರಲ್!

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಗ್ಲಾಮರಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬ್ಲ್ಯಾಕ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿ, ಸ್ಟೈಲಿಶ್ ಹಿಲ್ಸ್ ಶೂಗಳಲ್ಲಿ ಅವರು ನೀಡಿರುವ ಪೋಸ್‌ಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿವೆ.