
ಉಡುಪಿ ಜಿಲ್ಲೆಯ ವಿಕಲಚೇತನರ ಸಬಲೀಕರಣ ಇಲಾಖೆ 2024-25ನೇ ಸಾಲಿಗೆ ಶೇ.75 ಅಥವಾ ಹೆಚ್ಚಿನ ದೈಹಿಕ ವಿಕಲತೆಯುಳ್ಳ ವಿಕಲಚೇತನರಿಂದ ಬ್ಯಾಟರಿ ಚಾಲಿತ ವೀಲ್ಹ್‌ಚೇರ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು ಮತ್ತು ವಾರ್ಷಿಕ ಆದಾಯ 2 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ಅರ್ಜಿ ಆನ್‌ಲೈನ್ (ಸೇವಾ ಸಿಂಧು, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್) ಮೂಲಕ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಯ ಪ್ರತಿಯನ್ನು ಇಲಾಖೆಗೆ ಸಲ್ಲಿಸುವುದು ಅಗತ್ಯ.
ಹೆಚ್ಚಿನ ಮಾಹಿತಿಗೆ 0820-2574810/811 ಗೆ ಕರೆಮಾಡಿ ಅಥವಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಣಿಪಾಲ ಕಚೇರಿಗೆ ಭೇಟಿ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.