
ಉಡುಪಿ: ನಕ್ಸಲರ ಶರಣಾಗತಿ ಸರಿಯಾದ ವಿಧಾನದಲ್ಲಿ ನಡೆದಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.
ಆರು ಮಂದಿ ನಕ್ಸಲರ ಶರಣಾಗತಿಗೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಕ್ಸಲರ ಶರಣಾಗತಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿ ಸಮ್ಮುಖದಲ್ಲಿ ಪ್ರಕ್ರಿಯಾತ್ಮಕವಾಗಿ ನಡೆಯಬೇಕಿತ್ತು. ಶರಣಾಗತಿ ನಂತರ ಕಾನೂನು ಪ್ರಕ್ರಿಯೆಗೆ ಒಳಪಡಿಸಿ, ಅವರ ವಿರುದ್ಧದ ಎಫ್‌ಐಆರ್‌ಗಳ ಪರಿಶೀಲನೆ ಮಾಡಬೇಕಾಗಿತ್ತು. ಆದರೆ ಈ ಎಲ್ಲಾ ಕ್ರಮಗಳನ್ನು ನಿರ್ಲಕ್ಷಿಸಿ ಸರಕಾರ ತುರ್ತು ಕ್ರಮದಲ್ಲಿ ಶರಣಾಗತಿ ಪ್ರಕ್ರಿಯೆ ಮುಗಿಸಿದೆ,” ಎಂದು ಆರೋಪಿಸಿದರು.
ಅವರು ಮುಂದುವರೆದು, “ನಕ್ಸಲರು ಸರಿಯಾಗಿ ಶರಣಾಗತಿಯಾಗಲು ಇಂತಹ ತುರ್ತು ವೈಖರಿ ಅವಶ್ಯಕವಿರಲಿಲ್ಲ. ಇಂಥ ಪ್ರಕ್ರಿಯೆಯ ಮೂಲಕ ಸರ್ಕಾರದ ಉದ್ದೇಶಗಳು ಅನುಮಾನಾಸ್ಪದವಾಗುತ್ತಿವೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.