ಪುಟ್ಟ ಕೈಗಳಲ್ಲಿ ಪರ್ಯಾಯ ವೈಭವ: ಆನಂದತೀರ್ಥ ವಿದ್ಯಾಲಯದಲ್ಲಿ ಸಂಭ್ರಮ

Date:

spot_img

ಮಕ್ಕಳಿಗೆ ನಮ್ಮ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ, ಆನಂದತೀರ್ಥ ವಿದ್ಯಾಲಯದ ಪೂರ್ವ ಪ್ರಾಥಮಿಕ ವಿಭಾಗವು ಜನವರಿ 20ರಂದು ಶಾಲಾ ಆವರಣದಲ್ಲಿ ಉಡುಪಿ ಪರ್ಯಾಯ ಸಂಪ್ರದಾಯ ಹಾಗೂ ವೈಭವವನ್ನು ಅತ್ಯಂತ ಸೊಗಸಾಗಿ ಮೂಡಿಸಿತು.
ಭವ್ಯ ಮೆರವಣಿಗೆ ಆನಂದತೀರ್ಥ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡು, ಮಕ್ಕಳು ಕುಣಿತ ಭಜನೆ, ಭರತನಾಟ್ಯ, ಭಜನೆ ಗಾಯನ, ಹುಲಿ ವೇಷ, ಚೆಂಡೆ ಹಾಗೂ ಪಲ್ಲಕ್ಕಿ ಪ್ರದರ್ಶನಗಳ ಮೂಲಕ ಪಾರಂಪರಿಕ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದರು. ಕಲಶವನ್ನು ಹೊತ್ತು ಹೆಜ್ಜೆ ಹಾಕಿದ ಪುಟ್ಟ ಬಾಲಕಿಯರು ಮೆರವಣಿಗೆಗೆ ವಿಶೇಷ ಶೋಭೆ ನೀಡಿದರು.
ಮೆರವಣಿಗೆ ಶಾಲಾ ಪ್ರವೇಶದ್ವಾರ ತಲುಪುತ್ತಿದ್ದಂತೆ, ಶ್ರೀ ಕೃಷ್ಣ ಮಠದ ಮುಖ್ಯ ದ್ವಾರ ಹಾಗೂ ಕನಕನ ಕಿಂಡಿಯನ್ನು ಸ್ಮರಿಸುವಂತೆ ಸಜ್ಜುಗೊಂಡ ಪ್ರವೇಶದ್ವಾರವು ಎಲ್ಲರ ಮನ ಸೆಳೆಯುವ ದೃಶ್ಯವಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅಷ್ಟಮಠದ ಪುಟ್ಟ ಯತಿಗಳು ಕಾಣಿಸಿಕೊಂಡರು. ಅಷ್ಟಮಠ ಯತಿಗಳ ವೇಷಧಾರಿಗಳಾಗಿ ಮಕ್ಕಳು ಪರ್ಯಾಯ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಿ, ಬಳಿಕ ಮಂತ್ರಾಕ್ಷತೆ ಹಾಗೂ ಫಲಗಳನ್ನು ನೀಡಿ ಎಲ್ಲರಿಗೂ ಆಶೀರ್ವಾದ ನೀಡಿದರು.


ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳು, ಶ್ರೀ ಶ್ರೀಹರಿ ಭಟ್ (ಉಪಾಧ್ಯಕ್ಷರು), ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯಾ (ಖಜಾಂಚಿ), ಶ್ರೀ ಮಧ್ವರಾಜ ಭಟ್ , ಡಾ. ಗೀತಾ ಶಶಿಧರ್ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಈ ಭವ್ಯ ಕಾರ್ಯಕ್ರಮವನ್ನು ಕಂಡು, ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಪೂರ್ವ ಪ್ರಾಥಮಿಕ ಶಿಕ್ಷಕರ ಪರಿಶ್ರಮವನ್ನು ಮೆಚ್ಚಿ ಗುಣಗಾನ ಮಾಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಾಲಾ-ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದ ಎಲ್ಲಾ ಶಾಲೆ ಮತ್ತು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಗುಳಗಳು ಅಶ್ಲೀಲತೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಾಮಾನ್ಯ ಬೈಗುಳಗಳು ಕಾನೂನಿನ ಪ್ರಕಾರ ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಬಿದಿರೆಯಲ್ಲಿ ವಿವಾಹಿತೆ ಆತ್ಮಹತ್ಯೆ | ಕಾರಣದ ಪತ್ತೆಗೆ ಪೊಲೀಸ್ ತನಿಖೆ

ಮೂಡಬಿದಿರೆಯ ಕುಬೇರು ಗ್ರಾಮದಲ್ಲಿ ವಿವಾಹಿತೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಂಗ್ರೆಸ್ ನಾಟಕಕ್ಕೆ ಬಿಜೆಪಿ ತಿರುಗೇಟು

ಕಾರ್ಕಳದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರ ತೀಕ್ಷ್ಣ ರಾಜಕೀಯ ತಿರುಗೇಟಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.