
ಮೈಸೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಪೋಲೀಸರ ಮೇಲಿನ ತಪ್ಪು ಆರೋಪವನ್ನು ಖಂಡಿಸಿದರು. “ನಾನು ಉಪಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ,ಉದಯಗಿರಿ ಗಲಭೆಯಲ್ಲಿ ಪೊಲೀಸ್ ಅಧಿಕಾರಿಗಳು ಯಾವ ತಪ್ಪು ಕೂಡ ಮಾಡಿಲ್ಲ. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಎಷ್ಟೇ ಗಾಯಗೊಂಡರೂ, ಅವರು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದಾರೆ” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಚಿವ ಕೆ.ಎಸ್. ರಾಜಣ್ಣ ಅವರು “ಪೋಲೀಸರ ಕರ್ತವ್ಯ ಲೋಪವೇ ಗಲಭೆಗೆ ಕಾರಣ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ , ಡಿ.ಕೆ ಶಿವಕುಮಾರ್ ಅವರು “ಯಾರು ಏನು ಹೇಳಿದರೂ ಅದು ಮುಖ್ಯವಲ್ಲ. ನಾನು ಮಾಹಿತಿ ಪಡೆದಿದ್ದೇನೆ, ಗಲಭೆಯಲ್ಲಿ ಕಲ್ಲು ಎಸೆದವರು 14-15 ವರ್ಷದ ಹುಡುಗರು. ಅವರು ಹಿರಿಯರ ಮಾತನ್ನು ಕೂಡ ಕೇಳಲಿಲ್ಲ. ಗಲಭೆಯನ್ನು ಹಿರಿಯರು ಮತ್ತು ಮುಖಂಡರು ಶಾಂತಿಯುತವಾಗಿ ನಿಯಂತ್ರಿಸಿದ್ದಾರೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
“ಪೋಲೀಸರಿಗೆ ಭದ್ರತೆ ಇತ್ತು ಆದರೆ ಅಲ್ಲಿದ್ದ ಜನರಿಗೆ ಭದ್ರತೆ ಇರಲಿಲ್ಲ. ಪೋಲೀಸರು ಗಲಭೆ ಮಾಡಿದವರನ್ನು ಪತ್ತೆಹಚ್ಚಿ ಅವರನ್ನು ಬಂಧಿಸುವ ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.