
ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಸ್ವಕ್ಷೇತ್ರ ಕುಣಿಗಲ್‌ನ ರಂಗಸ್ವಾಮಿ ಬೆಟ್ಟದ ಪ್ರವೇಶ ದ್ವಾರದಲ್ಲಿದ್ದ ವಿಷ್ಣು ದೇವರ ವಿಗ್ರಹವನ್ನು ಅಪರಿಚಿತ ಕಿಡಿಗೇಡಿಯೊಬ್ಬ ನಾಶ ಮಾಡಿರುವ ಘಟನೆ ನಡೆದಿದೆ. ತಂತಿ ಬೇಲಿ ಹಾಕಿದ್ದರೂ ವಿಗ್ರಹವನ್ನು ಧ್ವಂಸ ಮಾಡಲಾಗಿದೆ.
ಸಿಸಿಟಿವಿ ದೃಶ್ಯ ವೈರಲ್, ಭಕ್ತರ ಆಕ್ರೋಶ
ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಹಿಂದೂ ಸಮುದಾಯದಲ್ಲಿ ಆಕ್ರೋಶ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ದೇವತೆಗಳ ಭದ್ರತೆ ಎಷ್ಟು? ಎಂಬ ಪ್ರಶ್ನೆ ಮೂಡಿದೆ.
ಪೊಲೀಸ್ ಪ್ರಕರಣ ದಾಖಲು
ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಡೋನಹಳ್ಳಿ ಗ್ರಾಮದ ಶಂಕಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.