spot_img

ತುಳು ಭಾಷೆ ಬಳಕೆ ವಿವಾದ: ಜಿ.ಪಂ ಪತ್ರ ಚರ್ಚೆಗೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

Date:

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಗೆ ರಾಜ್ಯಭಾಷಾ ಮಾನ್ಯತೆ ನೀಡಬೇಕೆಂಬ ಹೋರಾಟ ಬಿಗಿಗೊಂಡಿದ್ದ ಸಂದರ್ಭದಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕರಿಗೆ ದ.ಕ. ಜಿಲ್ಲಾ ಪಂಚಾಯತ್ ಕಳುಹಿಸಿದ ಒಂದು ಪತ್ರ ಚರ್ಚೆಗೆ ಗ್ರಾಸವಾಗಿದೆ.

ಕಾರ್ಕಳದ ನಾಗರೀಕ ಸೇವಾ ಸಂಘದ ಸಂಚಾಲಕ ಮುರಳೀಧರ್ ಅವರು “ಗ್ರಾಮ ಸಭೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು” ಎಂಬ ಮನವಿಗೆ ಪ್ರತಿಯಾಗಿ, ಜಿ.ಪಂ. ಸಿಇಒ ಅವರು ತಾ.ಪಂ. ಇಒಗಳಿಗೆ ಪತ್ರ ಕಳಿಸಿ, ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈ ಪತ್ರವು ತುಳು ಭಾಷೆ ಬಳಕೆ ನಿರ್ಬಂಧಿಸಲಾಗಿದೆ ಎಂಬ ತಪ್ಪು ಅಭಿಪ್ರಾಯ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಸಂವಿಧಾನ ವಿರುದ್ಧವೆಂದು ವಿರೋಧ
ಈ ಹಿನ್ನೆಲೆಯಲ್ಲಿ ತುಳು ಸಮುದಾಯದ ಹಲವು ಮುಖಂಡರು, ಚಿಂತಕರು, ಮತ್ತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು, “ಕರಾವಳಿ ಭಾಗದ ಶಾಸಕರು ಹಲವು ಬಾರಿ ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ್ದಾರೆ. ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ಸಹ ತುಳು ಭಾಷೆ ಬಳಸಿದ ಉದಾಹರಣೆಗಳಿವೆ. ಇಂತಹದರಲ್ಲಿ ಗ್ರಾಮ ಸಭೆಗಳಲ್ಲಿ ತುಳು ಬಳಕೆ ವಿರೋಧಿಸುವುದು ಅಸಮಂಜಸ” ಎಂದು ಹೇಳಿದ್ದಾರೆ.

ಡಿವಿಎಸ್ ಪ್ರತಿಕ್ರಿಯೆ
ಸಮಾಜ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಡಿವಿ ಸದಾನಂದ ಗೌಡ, “ತುಳು ಭಾಷೆ ಕನ್ನಡ ನಾಡಿನ ಮಾತೃಭಾಷೆ. ತುಳು ಬಳಕೆಗೆ ನಿರ್ಬಂಧ ಇಟ್ಟರೆ ಉರ್ದು ಭಾಷೆ ಯಾವ ನೈತಿಕತೆಯಿಂದ ಸರಕಾರಿ ದಾಖಲೆಗಳಲ್ಲಿ ಬಳಸಲಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಅಧಿಕೃತ ಸ್ಪಷ್ಟನೆ
ಜಿಲ್ಲಾ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಸ್ಪಷ್ಟಪಡಿಸಿ, “ತುಳು ಭಾಷೆಗೆ ವಿರೋಧವಾಗುವಂತೆ ಯಾವುದೇ ನೇರ ಆದೇಶ ಜಾರಿ ಮಾಡಿಲ್ಲ. ದೂರಿನ ಪರಿಶೀಲನೆಗಾಗಿ ಆಯಾ ತಾಲೂಕುಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮ ಸಭೆಗಳಲ್ಲಿ ಭಾಷಾ ಬಳಕೆಯ ನಿರ್ಧಾರ ಸ್ಥಳೀಯ ಮಟ್ಟದಲ್ಲೇ ಆಗಬೇಕು” ಎಂದರು.

ತುಳು ಸಾಹಿತ್ಯ ಅಕಾಡೆಮಿ ಪ್ರತಿಕ್ರಿಯೆ
“ಸಾಂಸ್ಕೃತಿಕ ವೈವಿಧ್ಯಕ್ಕೆ ಗೌರವ ಕೊಡುವುದು ಭಾರತೀಯ ಸಂವಿಧಾನದ ತಾತ್ಪರ್ಯ. ವಿವಾದ ಸೃಷ್ಟಿಯಾದ ಜಿ.ಪಂ ಪತ್ರವನ್ನು ವಾಪಸ್ ತೆಗೆದುಕೊಳ್ಳಬೇಕು.”ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.