
ಬೆಂಗಳೂರು: ಸುಪ್ರೀಂ ಕೋರ್ಟ್ ಶಿಫಾರಸಿನಂತೆ, ಹೈಕೋರ್ಟ್‌ಗಳ ಆಡಳಿತಾತ್ಮಕ ಗುಣಮಟ್ಟವನ್ನು ಹೆಚ್ಚಿಸಲು ದೇಶದ ವಿವಿಧ ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ. ಈ ಕ್ರಮದ ಭಾಗವಾಗಿ, ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಇತರ ರಾಜ್ಯಗಳ ಹೈಕೋರ್ಟ್‌ಗಳಿಗೆ ವರ್ಗಾಯಿಸಲಾಗಿದ್ದು, ಕೆಲವು ರಾಜ್ಯಗಳಿಂದ ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್‌ಗೆ ಬರಮಾಡಿಕೊಳ್ಳುತ್ತಿದೆ.
ಈ ಶಿಫಾರಸುಗಳು ಏಪ್ರಿಲ್ 15 ಮತ್ತು 19 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಧ್ಯಕ್ಷತೆಯಲ್ಲಿ ನಡೆದ ಸ್ಥಳಾಂತರ ಸಮಿತಿಯ ಸಭೆಯಲ್ಲಿ ಕೈಗೆತ್ತಿಕೊಳ್ಳಲಾಯಿತು. ನ್ಯಾಯಾಂಗ ವ್ಯವಸ್ಥೆಯ ಶ್ರೇಷ್ಠತೆ ಮತ್ತು ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗುತ್ತಿದೆ.
ವರ್ಗಾಯಿಸಲಾದ ನ್ಯಾಯಮೂರ್ತಿಗಳು – ಎಲ್ಲಿಂದ ಎಲ್ಲಿಗೆ?
ನ್ಯಾ. ಹೇಮಂತ್ ಚಂದನ ಗೌಡರ್ – ಕರ್ನಾಟಕ ಹೈಕೋರ್ಟ್ → ಮದ್ರಾಸ್ ಹೈಕೋರ್ಟ್
ನ್ಯಾ. ಕೃಷ್ಣನ್ ನಟರಾಜನ್ – ಕರ್ನಾಟಕ ಹೈಕೋರ್ಟ್ → ಕೇರಳ ಹೈಕೋರ್ಟ್
ನ್ಯಾ. ಎನ್. ಶ್ರೀನಿವಾಸ ಸಂಜಯ್ ಗೌಡ – ಕರ್ನಾಟಕ ಹೈಕೋರ್ಟ್ → ಗುಜರಾತ್ ಹೈಕೋರ್ಟ್
ನ್ಯಾ. ಕೃಷ್ಣ ದೀಕ್ಷಿತ್ – ಕರ್ನಾಟಕ ಹೈಕೋರ್ಟ್ → ಒಡಿಶಾ ಹೈಕೋರ್ಟ್
ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾದ ನ್ಯಾಯಮೂರ್ತಿಗಳು:
ನ್ಯಾ. ಪೆರುಗು ಶ್ರೀಸುಧ – ತೆಲಂಗಾಣ ಹೈಕೋರ್ಟ್ → ಕರ್ನಾಟಕ ಹೈಕೋರ್ಟ್
ನ್ಯಾ. ಡಾ. ಕೆ. ಮನ್ಮಧ ರಾವ್ – ಆಂಧ್ರಪ್ರದೇಶ ಹೈಕೋರ್ಟ್ → ಕರ್ನಾಟಕ ಹೈಕೋರ್ಟ್
ಈ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಕೆಲ ವಕೀಲರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ, ಸುಪ್ರೀಂ ಕೋರ್ಟ್ ನ ನಿಲುವು ಸುಸ್ಪಷ್ಟವಾಗಿದ್ದು, ನ್ಯಾಯಮೂರ್ತಿಗಳ ಸ್ಥಳಾಂತರವು ಹೈಕೋರ್ಟ್‌ಗಳ ಪರಿಣಾಮಕಾರಿ ಕಾರ್ಯಚಟುವಟಿಕೆಗೆ ನೆರವಾಗಲಿದೆ ಎನ್ನಲಾಗಿದೆ.