
ಉಡುಪಿ : ದಿನಾಂಕ 08-08-2025ರಂದು ದೈವಾಧೀನರಾದ ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸಿದ್ದ, “ಕೂಡ್ದಿ ಕಲಾವಿದೆರ್ – ಪೆರ್ಡೂರು” ಸಂಸ್ಥೆಯ ಸ್ಥಾಪಕರಾದ ಪೆರ್ಡೂರು ಪ್ರಭಾಕರ ಕಲ್ಯಾಣಿಯವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು 2025ರ ಆಗಸ್ಟ್ 16ರಂದು (ಶನಿವಾರ) ಸಂಜೆ 5.30ಕ್ಕೆ ಪೆರ್ಡೂರು ಅನಂತ ಸೌರಭ ಸಭಾಭವನದಲ್ಲಿ ನಡೆಯಲಿದೆ.
ಅವರ ನಿಕಟ ಸಂಬಂಧ ಹೊಂದಿರುವ ಸಂಘ-ಸಂಸ್ಥೆಗಳು, ರಂಗಭೂಮಿ ಮಿತ್ರರು, ಅಭಿಮಾನಿಗಳು ಹಾಗೂ ಗ್ರಾಮದ ಜನರು ಈ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ “ಕೂಡ್ದಿ ಕಲಾವಿದೆರ್, ಪೆರ್ಡೂರು” ಸಂಘಟನೆಯವರು ವಿನಂತಿಸಿದ್ದಾರೆ.
ಸಂಪರ್ಕ: 98801 04857