
ಉತ್ತರ ಪ್ರದೇಶದ ಆಗ್ರಾದಲ್ಲಿ ಟಿಸಿಎಸ್ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಮಾನವ್ ಶರ್ಮಾ (28) ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿ 24ರಂದು ಡಿಫೆನ್ಸ್ ಕಾಲೊನಿಯಲ್ಲಿರುವ ಮನೆಯಲ್ಲಿ ನೇಣು ಬಿಗಿದ ಅವರು, ಸಾಯೋ ಮುನ್ನ ಲೈವ್ ಆಗಿ ತನ್ನ ನೋವು ತೋಡಿಕೊಂಡಿದ್ದಾರೆ.
“ನಾನು ಸಾಯಲು ನನ್ನ ಹೆಂಡತಿಯೇ ಕಾರಣ. ಪುರುಷರಿಗೆ ನ್ಯಾಯ ಕೊಡಿಸುವ ಕಾನೂನು ಈ ದೇಶದಲ್ಲಿ ಇಲ್ಲ” ಎಂದು ಹೇಳಿರುವ ಅವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮದುವೆಯಾದ ಒಂದು ವರ್ಷದೊಳಗೆ ಪತ್ನಿ ಹಳೆಯ ಪ್ರೇಮಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದರಿಂದ ಮಾನವ್ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.