spot_img

ಕ್ಷಮೆ ಕೇಳದಿದ್ದರೆ ‘ಥಗ್ ಲೈಫ್’ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶವಿಲ್ಲ – ಕೆಎಫ್‌ಸಿಸಿ ಸ್ಪಷ್ಟನೆ!

Date:

spot_img

ಬೆಂಗಳೂರು: ತಮ್ಮ ವಿವಾದಿತ ಹೇಳಿಕೆಯ ಕುರಿತು ಕ್ಷಮೆ ಕೇಳದೇ ಇದ್ದರೆ ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಪ್ರಕಟಿಸಿದೆ.

ಸೋಮವಾರ ಕನ್ನಡಪರ ಸಂಘಟನೆಗಳ ಮನವಿಯನ್ನು ಸ್ವೀಕರಿಸಿದ ನಂತರ KFCC ಅಧ್ಯಕ್ಷ ಎಂ. ನರಸಿಂಹಲು ಮಾತನಾಡಿ, “ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ” ಎಂಬ ಕಮಲ್ ಹಾಸನ್ ಹೇಳಿಕೆ ಖಂಡನೀಯವಾಗಿದೆ ಎಂದು ಹೇಳಿದ್ದಾರೆ. “ಅವರು ಕ್ಷಮೆ ಕೇಳದೇ ಇದ್ದರೆ ಚಿತ್ರದ ಬಿಡುಗಡೆಯ ಪ್ರಶ್ನೆಯೇ ಇಲ್ಲ” ಎಂದು ತೀವ್ರವಾಗಿ ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ವಿತರಕರು ಬೇರೆ ಚಿತ್ರಗಳ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದಾರೆ. “ಕ್ಷಮೆ ಕೇಳಿದರೂ ಕೂಡ ತಕ್ಷಣದಲ್ಲಿ ಬಿಡುಗಡೆಗೆ ಅನುಮತಿ ಸಿಗದು,” ಎಂದು ತಿಳಿಸಿರುವ ಮಂಡಳಿ, ದೂರು ನೀಡಿದ ಕನ್ನಡ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಈ ವೇಳೆ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಕೂಡ ಪ್ರತಿಕ್ರಿಯಿಸಿ, “ನಮ್ಮ ಕಲಾವಿದರ ಸಂಘಗಳು ನಾಡಿನ ಗೌರವ ಉಳಿಸಬೇಕು. ಇದು ನಮ್ಮ ಸ್ವಾಭಿಮಾನದ ವಿಷಯ. ಕಮಲ್ ಹಾಸನ್ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ,” ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಈ ವೇಳೆ ದುಬೈನಲ್ಲಿ ಇದ್ದು, ಜೂನ್ 3ರಂದು ಚೆನ್ನೈಗೆ ಮರಳಲಿದ್ದಾರೆ ಎನ್ನಲಾಗಿದೆ. ‘ಥಗ್ ಲೈಫ್’ ಚಿತ್ರದ ವಿತರಕರು ಕೂಡ KFCCಗೆ ಮಧ್ಯಾಹ್ನದವರೆಗೆ ಸಮಯ ಕೋರಿದ್ದಾರೆ. ಆದರೆ “ನಾವು ಕಮಲ್ ಹಾಸನ್‌ಗಾಗಿ ಕಾಯುತ್ತಿಲ್ಲ,” ಎಂಬುದಾಗಿ ಮಂಡಳಿ ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

AI ಕ್ರಾಂತಿ: ಆಗಸ್ಟ್‌ನಲ್ಲಿ ಓಪನ್‌ಎಐನ ಬಹುನಿರೀಕ್ಷಿತ GPT-5 ಬಿಡುಗಡೆಗೆ ಸಿದ್ಧತೆ

ಓಪನ್‌ಎಐ ತನ್ನ ನೂತನ ಮತ್ತು ಹೆಚ್ಚು ಶಕ್ತಿಶಾಲಿ GPT-5 ಮಾದರಿಯನ್ನು ಆಗಸ್ಟ್‌ನ ಆರಂಭದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ

ದಿನ ವಿಶೇಷ – ನಿಸರ್ಗ ಸಂರಕ್ಷಣಾ ದಿನ

ಈ ದಿನವು ನಮ್ಮ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಸುಸ್ಥಿರವಾಗಿ ಬಳಸುವ ಮಹತ್ವವನ್ನು ನೆನಪಿಸುತ್ತದೆ.

ಆರೋಗ್ಯಕ್ಕೆ ಮಾರಕವಾಗಬಲ್ಲ ದಿನನಿತ್ಯದ ಸೊಪ್ಪು: ಕಿಡ್ನಿ ಕಲ್ಲುಗಳ ಸೃಷ್ಟಿಗೆ ಪ್ರಮುಖ ಕಾರಣ!

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಮೂತ್ರಪಿಂಡಗಳು, ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತವೆ.

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.