spot_img

ಜನಿವಾರದ ಮೇಲಿನ ದ್ವೇಷವಲ್ಲ ಇದು, ಜನಿವಾರದವರ ಮೇಲಿನ ದ್ವೇಷ.

Date:

ಜನಿವಾರದ ಮೇಲಿನ ದ್ವೇಷವಲ್ಲ ಇದು, ಜನಿವಾರದವರ ಮೇಲಿನ ದ್ವೇಷ. ಹೇಗಾದರೂ ಹಿಂದೆ ಹಾಕಬೇಕು ಎನ್ನುವ ಧೋರಣೆಗೆ ಒಳಗಾಗಿ ಈ ರೀತಿಯಾಗಿ ಅಹಂಕಾರದ ಪರಮಾವಧಿಗೆ ತಲುಪಿದ್ದಾರೆ.

ಪರೀಕ್ಷೆ ಬರೆಯುವಾಗ ಕಾಪಿ ಮಾಡಲು ಬೇಕಾದಷ್ಟುಅವಕಾಶವಿರುವ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಹೆಣ್ಣೋ ಅಥವಾ ಗಂಡೋ ಎಂದು ಕೂಡ ತಿಳಿದುಕೊಳ್ಳದಷ್ಟರ ಮಟ್ಟಿಗೆ ಮುಚ್ಚಿಕೊಳ್ಳುವ ಹಿಜಾಬಿಗೆ ಮುಕ್ತ ಅವಕಾಶವನ್ನು ಕೊಟ್ಟು ಯಾವುದೇ ರೀತಿಯಲ್ಲೂ ಕೂಡ ಬಾಧಕವಲ್ಲದ ಜನಿವಾರವನ್ನು ತೆಗೆಸುತ್ತಾರೆ. ಇದು ಕೇವಲ ಹಿಂದು ದ್ವೇಷವಲ್ಲದೆ ಅದರಲ್ಲೂ ಬ್ರಾಹ್ಮಣ ದ್ವೇಷವಲ್ಲದೆ ಮತ್ತೇನು ಅಲ್ಲ. ಸೋಲಿಸುವುದಿದ್ದರೆ ಸಾಧನೆಯಿಂದ ಸೋಲಿಸಬೇಕು ಹೀಗೆ ಹಾಗೆಲ್ಲಾ ದ್ವೇಷದಿಂದ ಸೋಲಿಸುವುದಲ್ಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಬಹಳಷ್ಟು ಕೇಳಿಬರುತ್ತಿದೆ. ವಿಶ್ವಮಾನವನ ಕೇಂದ್ರದಲ್ಲಿ ಅಮಾನವೀಯ ಪ್ರಕರಣಗಳು.

ಇವರ ನರನಾಡಿಯಲ್ಲಿ ತುಂಬಿರುವ ಬ್ರಾಹ್ಮಣ ದ್ವೇಷಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಅದರಲ್ಲಿ ಇದು ಕೂಡ ಒಂದು. ಜಜಿಯಾ ಕಾನೂನಿದ್ದ ಮತಾಂಧ ಮೊಘಲರ ಕಾಲದಲ್ಲೂ ಕೂಡ ಈ ಹೀನಾಯ ಪರಿಸ್ಥಿತಿ ಇರಲಿಲ್ಲವೇನೋ. ಅದಕ್ಕಿಂತ ಕಳಪೆ ಸ್ಥಿತಿಯಲ್ಲಿ ಹಿಂದುಗಳು ಹಾಗೂ ಬ್ರಾಹ್ಮಣರು ಈ ಪಾಪಿಗಳ ಅಧಿಕಾರದಲ್ಲಿ ಬದುಕುತ್ತಿದ್ದಾರೆ. ಅಲ್ಲದಿದ್ದರೆ ಯಾವುದೇ ಉಪದ್ರವಲ್ಲದ ಜನಿವಾರವನ್ನು ತೆಗೆಸುವ ದರ್ದು ಏನಿತ್ತು. ಬ್ರಾಹ್ಮಣ ಜನಿವಾರಕ್ಕೆ ಕೊಡುವಷ್ಟು ಮಹತ್ವ ಯಾವುದಕ್ಕೂ ಕೊಡುವುದಿಲ್ಲ. ಅವನ ಜಾತಿಯ ಅಭಿಮಾನ ಹಾಗೂ ಸಂಕೇತವಾಗಿ ಗುರುತಿಸಿಕೊಡುವುದು ಜನಿವಾರ. ಹಾಗೆಂದು ಉಳಿದವರಿಗೆ ಇದರಿಂದ ಯಾವುದೇ ತೊಂದರೆಯಾದದ್ದು ಇದ್ದರೆ ಹೇಳಲಿ ನೋಡೋಣ. ಕೆಲವರಿಗೆ ಮುಂಡಾಸು,ಕೆಲವರಿಗೆ ಟೋಪಿ ಇನ್ನು ಕೆಲವರಿಗೆ ಮುಖದಿಂದ ಕಾಲಿನ ತನಕ ಮುಚ್ಚಿಕೊಳ್ಳುವ ವ್ಯವಸ್ಥೆ. ಹೀಗೆ ಅವರವರಿಗೆ ಅವರಿಗಿರುವ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳುವ ಅಧಿಕಾರ ಸಂವಿಧಾನಬದ್ಧವಾಗಿದೆ. ಮಾತು ಮಾತಿಗೆ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಬೊಗಳುವ ಯಾರಿಗೂ ಕೂಡ ಈ ವಿಚಾರಗಳಲ್ಲಿ ಸಂವಿಧಾನದ ನೆನಪು ಬರುವುದಿಲ್ಲ.

ಕಳೆದ ವರ್ಷ ಪ್ರದೀಪ್ ಎನ್ನುವ ಮಂಡ್ಯದ ಹುಡುಗ ಐಎಎಸ್ ಪರೀಕ್ಷೆಯಲ್ಲಿ ರಾಂಕ್ ಪಡೆದರು ಕೂಡ ಬ್ರಾಹ್ಮಣ ಎನ್ನುವ ಕಾರಣದಿಂದ ಮೀಸಲಾತಿಯ ಆಧಾರದಲ್ಲಿ ಮತ್ತೊಬ್ಬ ಸ್ಥಾನವನ್ನು ಪಡೆದುಕೊಂಡ ಕಾರಣದಿಂದ ಈತನ ರ್ಯಾಂಕ್ ನಯಾ ಪೈಸೆ ಉಪಯೋಗ ಬರಲಿಲ್ಲ. ಆ ಬೇಸರವನ್ನು ವಾರ್ತಾ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳ ಮೂಲಕವಾಗಿ ರಾಜ್ಯದ ಮುಂದೆ ವ್ಯಕ್ತಪಡಿಸಿದ್ದ. ಈತ ಬ್ರಾಹ್ಮಣ ಎನ್ನುವ ಕಾರಣಕ್ಕಾಗಿ ಈತನ ಪರಿಶ್ರಮವೆಲ್ಲ ವ್ಯರ್ಥವಾಯಿತು. ಇದೇ ಶಿವಮೊಗ್ಗದಲ್ಲಿ ಕಳೆದ ವರ್ಷ ಹಠಕ್ಕೆ ಬಿದ್ದು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ತಿನ್ನಿಸಲಾಯಿತು. ಅದೇ ರೀತಿಯಾಗಿ ನಿನ್ನೆ ಶುಚಿವ್ರತ್ ಎನ್ನುವ ಬ್ರಾಹ್ಮಣ ಹುಡುಗನಿಗೆ ಜನಿವಾರವನ್ನು ತೆಗೆಯುವಂತೆ ಹೇಳಿ ಆ ಮೂಲಕ ಪರೀಕ್ಷೆಯ ಅವಕಾಶವನ್ನು ತಪ್ಪಿಸಿ ವಿದ್ಯಾರ್ಥಿಯ ಜೀವನದ ಮುಂದೆ ಆಟವಾಡುತ್ತಿದ್ದೀರಿ. ಯೋಗ್ಯತೆ ಇದ್ದರೆ ಸಾಧನೆಗಿಂತ ಪ್ರತಿಸ್ಪರ್ಧಿಯನ್ನು ಸೋಲಿಸಬೇಕು. ಅದು ಬಿಟ್ಟು ಮೀಸಲಾತಿ ಇದೆ, ಅವಕಾಶ ಇದೆ, ನಮ್ಮದೇ ಸರ್ಕಾರ ಇದೆ ಎನ್ನುವ ಅಹಂಕಾರದಿಂದ ವರ್ತಿಸುವುದು ಸರಿಯಲ್ಲ. ಮಕ್ಕಳು ಎಲ್ಲರಿಗೂ ಒಂದೇಯಲ್ಲವೇ. ಅಧಿಕಾರಿಗಳೇ ಕನಿಷ್ಠ ಮಾನವೀಯತೆಯಾದರು ಇರಲಿ.

ಈ ಬ್ರಾಹ್ಮಣ ದ್ವೇಷಕ್ಕೆ ಯಾವುದೇ ಮದ್ದಿಲ್ಲ. ಮೇಲಿನ ಸ್ಥಾನದಲ್ಲಿರುವ ಬ್ರಾಹ್ಮಣರು ಇದಕ್ಕೆ ಹೋರಾಟ ಮಾಡಬೇಕೆ ವಿನಃ ಸುಮ್ಮನೆ ರಸ್ತೆ ಬದಿಯ ಹೋರಾಟಕ್ಕೆ ನಯಾ ಪೈಸೆ ಕಿಮ್ಮತ್ತಿಲ್ಲ. ಅಧಿಕಾರವನ್ನು ಉಪಯೋಗಿಸಿಕೊಂಡು ಬ್ರಾಹ್ಮಣರು ಹೋರಾಟಕ್ಕೆ ಇಳಿದರೆ ಈ ಅಹಂಕಾರದ ಪ್ರಕರಣಗಳೆಲ್ಲವೂ ಕೂಡ ನಿಲ್ಲುವುದರಲ್ಲಿ ಸಂಶಯವಿಲ್ಲ. ಆದರೆ ಅಂತಹ ಕೆಚ್ಚೆದೆಯ ಬ್ರಾಹ್ಮಣ ಹೋರಾಟಗಾರರು ಬರುವ ತನಕ ಇದನ್ನು ಅನುಭವಿಸಲೇಬೇಕು. ಬ್ರಾಹ್ಮಣ ಸಂಘಟನೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.


ಸಂತೋಷ್ ಕುಮಾರ್ ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ