
ದಾವಣಗೆರೆ ನಗರದ ಬಡಾವಣೆಯಲ್ಲಿ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಜಯನಾಯ್ಕ್ ಎಸ್.ಎಲ್. ಅವರ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಾ.29 ರಂದು ಯುಗಾದಿ ಹಬ್ಬದ ಹಿನ್ನೆಲೆ ಕುಟುಂಬದವರು ಊರಿಗೆ ಹೋಗಿದ್ದ ವೇಳೆ, ಜಯನಾಯ್ಕ್ ಮನೆಗೆ ಬೀಗ ಹಾಕಿ ರಾತ್ರಿ ಪಾಳಿಗೆ ಹಾಜರಾಗಿದ್ದರು. ಮರುದಿನ ಬೆಳಗ್ಗೆ 9.30ರ ವೇಳೆಗೆ ಮನೆಗೆ ಮರಳಿದಾಗ, ಮನೆಯ ಗೇಟ್ ಹಾಗೂ ಬಾಗಿಲಿನ ಇಂಟರ್‌ಲಾಕ್ ಮುರಿದುಕೊಂಡು ಕಳ್ಳರು ಒಳನುಗ್ಗಿರುವುದು ಗಮನಕ್ಕೆ ಬಂದಿದೆ.
ಈ ಕಳ್ಳತನದಲ್ಲಿ ಸುಮಾರು 60.5 ಗ್ರಾಂ ತೂಕದ ಚಿನ್ನಾಭರಣ (ಸರ, ಉಂಗುರ, ಬ್ರಾಸ್ಲೆಟ್, ಕಿವಿ ಓಲೆ) ಹಾಗೂ ರೂ. 5,000 ನಗದು ಕಳವುಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.