
ಕಟಕ್: 2 ಲಕ್ಷ ರೂ. ಮೌಲ್ಯದ ವಿದ್ಯುತ್ ಕಂಬ ಕಳವು ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಮಾನಸ್‌ಗೆ ಒಡಿಶಾ ಹೈಕೋರ್ಟ್ ವಿಶೇಷ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದೆ. ಆತ ತನ್ನ ಗ್ರಾಮದ ಸುತ್ತಮುತ್ತ 200 ಸಸಿಗಳನ್ನು ನೆಟ್ಟು 2 ವರ್ಷಗಳ ಕಾಲ ಪೋಷಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. 2024ರ ಡಿಸೆಂಬರ್‌ನಲ್ಲಿ ಬಂಧಿತನಾಗಿದ್ದ ಮಾನಸ್ ಮಾವು, ಬೇವು, ಹುಣಸೆ ಮರಗಳನ್ನು ನೆಟ್ಟು ಬೆಳಸಬೇಕು ಮತ್ತು ಪ್ರತಿ 15 ದಿನಗಳಿಗೊಮ್ಮೆ ಪೊಲೀಸರೆದುರು ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.