spot_img

ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಕಳ KGTTI ತರಬೇತಿ ಕೇಂದ್ರ‌ದ ಕಾರ್ಯ ಅಭಿನಂದನೀಯ – ವಿ ಸುನಿಲ್‌ ಕುಮಾರ್

Date:

ಸ್ವ ಉದ್ಯಮ ಹಾಗೂ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಆಶಾಕಿರಣವಾದ ಕಾರ್ಕಳದ KGTTI.

ಕಾರ್ಕಳ: ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲೂಕು ಮಟ್ಟದ ಕಾರ್ಕಳದಲ್ಲಿ KGTTI (ಕರ್ನಾಟಕ ಜರ್ಮನ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಪ್ರಾರಂಭಿಸಬೇಕೆಂಬುದು ನನ್ನ ಕನಸಾಗಿತ್ತು. ಕಾರ್ಕಳ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ವ ಉದ್ಯಮ ನಡೆಸಲು ಕೌಶಲ್ಯ ಆಧಾರಿತ ತರಬೇತಿ ದೊರೆಯಬೇಕು. ಹಾಗೂ ಈಗಿನ ಕಾಲ ಘಟ್ಟದ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಪೂರಕ ತರಬೇತಿ ಒದಗಿಸುವ ನಿಟ್ಟಿನಲ್ಲಿ ನಮ್ಮ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿತ್ತು.

ಈ ಸಂಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ ಇದೊಂದು ಅಲ್ಪಾವಧಿ ಉದ್ಯೋಗ-ಉದ್ದೇಶಿತ ಕೋರ್ಸ್‌ಗಳು ಆಗಿದ್ದು ಈ ತರಬೇತಿ ಕೇಂದ್ರದಲ್ಲಿ ನುರಿತ ಶಿಕ್ಷಕರಿಂದ ಸಿಸ್ಕೋ ಸರ್ಟಿಫೈಡ್ ನೆಟ್ ವರ್ಕ್ ಅಸೋಸಿಯೇಟ್ (CCNA) - ರೂಟಿಂಗ್ ಮತ್ತು ಸ್ವಿಚಿಂಗ್,  ಸಿಸ್ಕೋಐಟಿ ಎಸೆನ್ಸಿಯಲ್ಸ್ (ITE), ಟ್ಯಾಲಿ ಪ್ರೈಮ್, ಮಾಸ್ಟರ್‌ಕ್ಯಾಮ್, ಸಿಎನ್ ಸಿ ಮೆಷಿನಿಸ್ಟ್ ಟರ್ನಿಂಗ್ ಮತ್ತು ಮಿಲ್ಲಿಂಗ್‌, CNC ಪ್ರೋಗ್ರಾಮಿಂಗ್ ಮತ್ತು ಒಪರೇಶನ್ -ಟರ್ನಿಂಗ್, CNC ಪ್ರೋಗ್ರಾಮಿಂಗ್ ಮತ್ತು ಒಪರೇಶನ್–ಮಿಲ್ಲಿಂಗ್‌,  ಆಟೋಕಾಡ್, ಕ್ಯಾಟಿಯ R2022X ಕೋರ್ಸ್‌ ಸೇರಿದಂತೆಗಳಿಗೆ ತರಬೇತಿ ದೊರೆಯುತ್ತದೆ. ಇದು ಜರ್ಮನ್ ಮಾನದಂಡದಂತೆ ರೂಪಿತವಾಗಿದ್ದು ಪ್ರಚಲಿತ ವೃತ್ತಿಗಳ ಪ್ರಗತಿಶೀಲ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಪ್ರಾಯೋಗಿಕ ಬೋಧನೆ ಮತ್ತು ಸೈದ್ಧಾಂತಿಕ ಕಠಿಣತೆಯ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪ್ರಬುದ್ಧರಾಗಿ ಸಿದ್ಧರಾಗಿರುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ತರಬೇತಿ‌ ಕೇಂದ್ರ ಸ್ಥಾಪನೆಗೆ ಶ್ರಮವಹಿಸಿ ಪ್ರಾರಂಭಿಸಲಾಗಿತ್ತು.

ಕಳೆದ 2 ವರ್ಷಗಳಿಂದ ನಿರಂತರ ಪ್ರಯತ್ನದ ಫಲವಾಗಿ ಕಾರ್ಕಳದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ ಗಿರಿಧರ್ ಸಾಲ್ಯಾನ್ ಮತ್ತು ಸಿಬ್ಬಂದಿ ವರ್ಗದ ಮುತುವರ್ಜಿಯಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯದ ಅಲ್ಪಾವಧಿ ತರಬೇತಿ ನೀಡುವ ಕಾರ್ಯದಲ್ಲಿ ಸಂಸ್ಥೆ ಯಶಸ್ಸು ಕಾಣುತ್ತಿದೆ.

ಈವರೆಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ನೇರ ಉದ್ಯೋಗಕ್ಕೆ ನೇಮಕವಾಗಿರುವುದು ಹೆಮ್ಮೆಯ ಸಂಗತಿ. ಇದರ ಜೊತೆಗೆ ಇಲ್ಲಿ ತರಬೇತಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸಿರುತ್ತಾರೆ, ಹಾಗೂ ಸ್ವ ಸಾಮರ್ಥ್ಯದಿಂದ ಉದ್ಯೋಗ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ ಶೇಕಡಾ 80% ಗಿಂತ ಅಧಿಕ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿರುವುದು ಅತ್ಯಂತ ಗಮನಾರ್ಹ ಹಾಗೂ ಸಾರ್ಥಕ್ಯದ ಸಂಗತಿಯಾಗಿರುತ್ತದೆ.

ಸಂಸ್ಥೆಯ ಸ್ವಂತ ಕಟ್ಟಡಕ್ಕಾಗಿ ಈಗಾಗಲೇ 1.60 ಎಕ್ರೆ ಜಮೀನನ್ನು ಕಾಯ್ದಿರಿಸಿ ಶಾಸ್ವತ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಮುಂದಿನ ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಕಳ ಕ್ಷೇತ್ರದ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗ ಪಡೆಯುವಂತೆ ಕಾರ್ಕಳ ಶಾಸಕರು ಮಾಜಿ ಸಚಿವರಾದ ವಿ ಸುನಿಲ್‌ ಕುಮಾರ್‌ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಸೆಕ್ಯೂರಿಟಿ ಬಗೆಗಿನ ಸೆಂಟರ್ ಆಫ್ ಎಕ್ಸಲೆನ್ಸ್

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಪಾಸ್‌ವರ್ಡ್ ಇಲ್ಲದೆ ಇನ್​ಸ್ಟಾಗ್ರಾಮ್‌ಗೆ ಲಾಗಿನ್ ಆಗುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

ಪದೇ ಪದೇ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ತಾಪತ್ರಯದಿಂದ ಮುಕ್ತಿ ನೀಡಲು, ಇನ್​ಸ್ಟಾಗ್ರಾಮ್ ಒಂದು ಉಪಯುಕ್ತ ಆಯ್ಕೆಯನ್ನು ಹೊಂದಿದೆ.

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ರಜತ ಪೂರ್ತಿ: ಲೋಕ ಕಲ್ಯಾಣಾರ್ಥ ದಶಾವತಾರ ಮಂತ್ರ ಹೋಮದ ಆಯೋಜನೆ

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇವರ ರಜತ ಪೂರ್ತಿ ಸಂಭ್ರಮದ ಸಂದರ್ಭದಲ್ಲಿ ಮನೆ , ಮಠ , ಮಂದಿರ , ದೇವಸ್ಥಾನದಲ್ಲಿ ನಮ್ಮ ಮನೆ , ಗೋವು , ನಮ್ಮ ಗ್ರಾಮ , ನಮ್ಮ ರಾಜ್ಯ , ರಾಷ್ಟ್ರದ ರಕ್ಷಣೆಗಾಗಿ ದಶಾವತಾರ ಮಂತ್ರ ಹೋಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯಡ್ಕದ ಕೆಪಿಎಸ್ ತಂಡಕ್ಕೆ ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ತೋರಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಿರಿಯಡ್ಕದ ವಿದ್ಯಾರ್ಥಿಗಳು, ಉಡುಪಿ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.