ಉಡುಪಿ : ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಶಿಥಿಲ ವಾಗಿರುವ ಓಲಗ ಮಂಟಪವನ್ನು ದೇವರ ಪ್ರೇರಣೆಯಂತೆ ತೆರವುಗೊಳಿಸುವ ಕಾರ್ಯಕ್ಕೆ ದಿನಾಂಕ 25-06-2025, ಬುಧವಾರ ಪೂರ್ವಾಹ್ನ ಶ್ರೀ ದೇವರ ಅನುಗ್ರಹದಿಂದ ಶ್ರೀ ದೇವಾಲಯದಲ್ಲಿ, ವಿದ್ವಾನ್ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ಸ್ಥಾಪನೆ , ನವಕ ಪ್ರಧಾನ , ಕಲಶಾಭಿಷೇಕ , ಪ್ರಾರ್ಥನಾದಿ ಧಾರ್ಮಿಕ ವಿಧಿಗಳನ್ನು ನಡೆಸಿ, ನಂತರ ಶ್ರೀದೇವಳದ ಶಿಥಿಲ ಓಲಗ ಮಂಟಪವನ್ನು ಶ್ರದ್ಧೆಯಿಂದ ತೆರವುಗೊಳಿಸಲು ಚಾಲನೆ ನೀಡಲಾಯಿತು.

