
ಬೈಲೂರು : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ , ಭಜನಾ ಮಂಡಳಿಗಳ ಒಕ್ಕೂಟ , ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕಾರ್ಕಳ ತಾಲೂಕು ಇವರ ನೇತೃತ್ವದಲ್ಲಿ ದಿನಾಂಕ/27/07/2025 ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಬೈಲೂರು ವಲಯದ ಭಜನಾ ಮಂಡಳಿಗಳಿಗೆ ಪರಿಕರ ವಿತರಣಾ ಕಾರ್ಯಕ್ರಮ ನೆರವೇರಿತು. ಭಜನಾ ಮಂಡಳಿಗಳ ಒಕ್ಕೂಟದ ತಾಲೂಕಿನ ಸ್ಥಾಪಕ ಅಧ್ಯಕ್ಷರಾದ ಶ್ರೀಕಾಂತ್ ಪ್ರಭು ಪಳ್ಳಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಹಿರಿಯ ಭಜಕರಾದ ಕಮಲಾಕ್ಷ ನಾಯಕ್ ಕುಕ್ಕುಂದೂರು ಅಧ್ಯಕ್ಷತೆ ವಹಿಸಿಕೊಂಡು ಕಾರ್ಕಳದ ಭಜನಾ ಸಂಘಟನೆಗಳು ಎಲ್ಲಾ ರೀತಿಯಲ್ಲೂ ಮಾದರಿಯಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದು ಹೀಗೇ ಮುಂದುವರಿಯಲಿ ನಮ್ಮ ಆಶೀರ್ವಾದ ಸಹಕಾರ ಯಾವತ್ತೂ ಇರುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂ. ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು ಮಾತನಾಡಿ ಭಜಕರನ್ನು ಕರೆದು ಭಜನೆ ಮಾಡುವುದು, ಎಲ್ಲಾ ಕಡೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವುದು ಗೊತ್ತಿರುವ ವಿಚಾರ ಆದರೆ ಅಂತಹ ಭಜನಾ ಮಂಡಳಿಗಳಿಗೆ ಶಕ್ತಿ ತುಂಬುವ ಕಾರ್ಕಳದ ಭಜನಾ ಸಂಘಟನೆಗಳ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ . ಇದನ್ನು ಎಲ್ಲಾ ಕಡೆಗಳಲ್ಲೂ ಮಾಡುವಂತಾಗಲಿ. ಈ ನಿಟ್ಟಿನಲ್ಲಿ ಸಾಗಿದ್ದಲ್ಲಿ ಸಂಸ್ಕಾರಯುತ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಅತಿಥಿಗಳಾಗಿ ಹಿರಿಯ ಭಜಕಿ ಜ್ಯೋತಿ ಪೈ ಕುಕ್ಕುಂದೂರು, ಲಯನ್ಸ್ ನ ಸುರೇಶ್ ಶೆಟ್ಟಿ ಸಾಯಿರಾಂ ಉಪಸ್ಥಿತರಿದ್ದರು. ಭಜನಾ ಪರಿಷತ್ ತಾಲೂಕು ಅಧ್ಯಕ್ಷರು ಹರೀಶ್ ಹೆಗ್ಡೆ ಕಡ್ತಲ, ಭಜನಾ ಮಂಡಳಿಗಳ ಒಕ್ಕೂಟದ ತಾಲೂಕು ಅಧ್ಯಕ್ಷರು ಶೈಲೇಶ್ ಸಾಣೂರು, ಕರಾವಳಿ ಭಜನಾ ಸಂಸ್ಕಾರ ವೇದಿಕೆಯ ತಾಲೂಕು ಅಧ್ಯಕ್ಷರಾದ ಗುರುಪ್ರಸಾದ್ ಕಡಾರಿ, ಭಜನಾ ಮಂಡಳಿಗಳ ಒಕ್ಕೂಟದ ವಲಯ ಅಧ್ಯಕ್ಷರಾದ ಸ್ವಾತಿ ನಾಯಕ್, ಭಜನಾ ಪರಿಷತ್ ವಲಯ ಸಂಯೋಜಕ ಸುಶಾಂತ್ ನಕ್ರೆ, ಮೂರು ಸಂಘಟನೆಗಳ ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಕ್ಕೂಟದ ಬೈಲೂರು ವಲಯ ಕಾರ್ಯದರ್ಶಿ ಪ್ರವೀಣ್ ಕಲ್ಯಾ ವಂದನಾರ್ಪಣೆ ಗೈದರು. ಶೃತಾ ಹಾಗೂ ಹಿತಾ ಕಾರ್ಯಕ್ರಮ ನಿರೂಪಣೆ ಗೈದರು. ಪರಿಷತ್ ತಾಲೂಕು ಕಾರ್ಯದರ್ಶಿ ಸುಕೇಶ್ ಸಾಣೂರು ಭಜಕರೊಂದಿಗೆ ಹನುಮಾನ್ ಚಾಲೀಸಾವನ್ನು ಸಾಮೂಹಿಕ ಪಠಣ ಮಾಡಿಸಿದರು.

ಬೈಲೂರು ವಲಯದ ಕುಕ್ಕುಂದೂರು, ಎರ್ಲಪಾಡಿ, ನೀರೆ, ಬೈಲೂರು , ಪಳ್ಳಿ ಮತ್ತು ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 40 ಭಜನಾ ಮಂಡಳಿಗಳಿಗೆ ಪರಿಕರಗಳನ್ನು ವಿತರಿಸಲಾಯಿತು.
