
ಈ ಕಾರ್ಯಕ್ರಮ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಇಂದು ಮುಂಜಾನೆ ದೀಪ ಬೆಳಗುವ ಮೂಲಕ ಪ್ರಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಯಂತಿ ಶೆಟ್ಟಿ, ಹಿರಿಯ ಅಧ್ಯಾಪಕಿ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ಮಣ್ಣು ಭಾಗವಹಿಸಿದ್ದರು.
ಆಯೋಜಕರಾದ ಮನೋಹರ್ ಶೆಟ್ಟಿ ಅವರು ಪುಟಾಣಿ ಮಕ್ಕಳನ್ನು ಹಾಗೂ ಪೋಷಕರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟರು.
ಈ ಶಿಬಿರ ಏಪ್ರಿಲ್ 15 ರಿಂದ ಪ್ರಾರಂಭವಾಗಿ ಏಪ್ರಿಲ್ 19 ನೇ ತಾರೀಖಿನ ತನಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಬೇರೆ ಬೇರೆ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅದರ ಲಾಭವನ್ನು ಪಡೆದುಕೊಂಡರು.