
ಪೆರ್ಡೂರ್/ಕೊಳಲಗಿರಿ: ಹೆಬ್ರಿ ಯಿಂದ ಪೆರ್ಡೂರ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ರಸ್ತೆಯನ್ನು ಅಗೆದು ತಿಂಗಳು ಕಳೆದರೂ ಇಲ್ಲಿಯವರೆಗೆ ಸರಿಯಾಗಿ ದುರಸ್ತಿ ಮಾಡದ ಕಾರಣ, ರಸ್ತೆಯ ದುಃಸ್ಥಿತಿಯು ಪ್ರಯಾಣಿಕರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.
ಶಾಲಾ ಮಕ್ಕಳು, ಹಿರಿಯ ನಾಗರಿಕರಿಗೆ ಆತಂಕ
ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅಲ್ಲಲ್ಲಿ ಹಾಕಿರುವ ಕಲ್ಲುಗಳಿಂದಾಗಿ ನಡೆದುಕೊಂಡು ಹೋಗಲು ಶಾಲಾ ಮಕ್ಕಳು ಮತ್ತು ಹಿರಿಯ ನಾಗರಿಕರು ತೀವ್ರ ಆತಂಕ ಪಡುವಂತಾಗಿದೆ.
ಸಾರ್ವಜನಿಕರ ಹೇಳಿಕೆ ಪ್ರಕಾರ, “ರಸ್ತೆಯಲ್ಲಿ ಹಾಕಿರುವ ಕಲ್ಲುಗಳು ಬಸ್, ಕಾರು, ಲಾರಿಗಳು ಹಾದುಹೋಗುವಾಗ ಚಕ್ರಕ್ಕೆ ಸಿಕ್ಕಿ ಎಲ್ಲಿ ನಮ್ಮ ಮೇಲೆ ಹಾರುತ್ತವೆಯೋ” ಎಂಬ ಭಯದಲ್ಲೇ ಜನರು ಪ್ರತಿದಿನ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿದ್ದು, ತಕ್ಷಣವೇ ರಸ್ತೆಗೆ ಮುಕ್ತಿ ನೀಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಇಲ್ಲವೇ ಶೀಘ್ರವಾಗಿ ಡಾಂಬರೀಕರಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.



































