
ಕಾರ್ಕಳ: ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀ ದಿಲೀಪ್ ಮತ್ತು ಶ್ರೀಮತಿ ವಿನುತಾ ದಂಪತಿಯ ಪುತ್ರಿ ಬೇಬಿ ಲಿಷಿಕಾ ಅವರ 2ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗಿದೆ. ಈ ವಿಶೇಷ ಕ್ಷಣದ ಸಂದರ್ಭದಲ್ಲಿ ಅವರು ವಿಜೇತ ವಿಶೇಷ ಶಾಲೆಯ ದೇವರ ಮಕ್ಕಳು ಎಂದು ಕರೆಯಲಾಗುವ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಿ ಪ್ರೋತ್ಸಾಹ ನೀಡಿದ್ದಾರೆ.
ದಂಪತಿಯ ಈ ಮಾನವೀಯ ಕಾರ್ಯ ದೇವರ ಮಕ್ಕಳು ಹಾಗೂ ಸಿಬ್ಬಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದಲ್ಲಿ ಇತರರಿಗೂ ಪ್ರೇರಣೆಯಾಗುವಂತಹ ಈ ಉತ್ತಮ ಕಾರ್ಯಕ್ರಮದ ಮೂಲಕ ಸಹಾನುಭೂತಿ ಮತ್ತು ಪರೋಪಕಾರದ ಮಹತ್ವವನ್ನು ಅವರು ಸಾರಿದ್ದಾರೆ.