spot_img

ವೈಭವದ ಸುವರ್ಣ ಸಂಭ್ರಮ ಹೆಬ್ರಿ ಗಣೇಶೋತ್ಸವ ಅದ್ದೂರಿಯ ತೆರೆ

Date:

ಹೆಬ್ರಿ : ಹೆಬ್ರಿ ರಾಮ ಮಂಟಪದ ಗಣಪತಿ ಸನ್ನಿಧಿಯಲ್ಲಿ 5 ದಿನ ತ್ರಿಕಾಲ ಮಹಾಪೂಜೆ , 48 ನಾರಿಕೇಳ ಗಣಯಾಗ , ರಂಗ ಪೂಜೆ ಇತ್ಯಾದಿ ಸೇವಾದಿಗಳು ವೇದ ಮೂರ್ತಿ ನಾಗರಾಜ್ ಜೋಯಿಸ್ ರವರ ನೇತೃತ್ವದಲ್ಲಿ ನಡೆದವು .

ಪ್ರಸನ್ನ ಬಲ್ಲಾಳ್ ಸಂಸ್ಮರಣಾ ವೇದಿಕೆಯಲ್ಲಿ ನಾಡಿನ ಪ್ರಸಿದ್ಧ ತಂಡದ ತುಳು ನಾಟಕ , ಮಸ್ತ್ ಮ್ಯಾಜಿಕ್, ಯಕ್ಷಗಾನ ಪ್ರದರ್ಶನ , ಸಾಂಸ್ಕೃತಿಕ ನೃತ್ಯ ಪ್ರದರ್ಶನ, ಭಕ್ತಿ ಸಂಗೀತ – ಭಜನಾಮೃತ , ಯಕ್ಷ ಗಾನ ವೈಭವ ಯಕ್ಷಾಮೃತ ನೆರೆದ ಕಲಾಭಿಮಾನಿಗಳ ಮನೆಸೂರೆಗೊಂಡಿತು ಮತ್ತು ಸರಣಿ ಕ್ರೀಡಾ , ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರನ್ನು ಬಹುಮಾನ ನೀಡಿ ಪುರಸ್ಕರಿಸಲಾಯಿತು . 5 ದಿನಗಳ ಕಾಲ ನಡೆದ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಇವರಿಗೆ ಸುವರ್ಣ ಪುರಸ್ಕಾರ ಗೌರವ ನೀಡಲಾಯಿತು . ಗೌರವ ಸ್ವೀಕರಿಸಿ ಮಾತನಾಡಿದ ಡಾ.ಪ್ರದೀಪ್ ಕುಮಾರ್ ಹೆಬ್ರಿಯವರು ವಿಧ್ಯಾರ್ಥಿಗಳು ಸೃಜನಾತ್ಮಕವಾಗಿ ರೂಪುಗೊಳ್ಳುವ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಂಡು ಆ ಮೂಲಕ ಯುವಕರು ಸಮಾಜದ ಆಸ್ತಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿ ಮಾನವ ಮೊದಲು ಮಾನವೀಯತೆ ರೂಡಿಸಿಕೊಳ್ಳಬೇಕು ಮತ್ತು ದುರಾಸೆಯಿಂದ ಹೊರಬಂದು ತೃಪ್ತ ಜೀವನ ಸಾಗಿಸಲು ಸಾಧ್ಯವೆಂದು ತಿಳಿಸಿದರು.

ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಅಮರನಾಥ್ ಹೆಗ್ಡೆ ಮತ್ತು ಕಾರ್ಯದರ್ಶಿ ಮೋಹನದಾಸ್ ನಾಯಕ್, ಸ್ಥಾಪಕ ಸದಸ್ಯರುಗಳನ್ನು ಗೌರವಿಸಲಾಯಿತು. ಸಮಿತಿಯ ಪ್ರಗತಿಗೆ ದುಡಿದು ಕೀರ್ತಿಶೇಷರಾದ ಹೆಸರಲ್ಲಿ ನೀಡುವ ಸುವರ್ಣ ಸ್ಮೃತಿ ಗೌರವವನ್ನು ಅಗಲಿದ ಮಹನೀಯರ ಕುಟುಂಬದ ಸದಸ್ಯರಿಗೆ ನೀಡಿ ಗೌರವಿಸಲಾಯಿತು. ದಾನಿಗಳನ್ನು ಸಮಿತಿಯ ಉಪಾಧ್ಯಕ್ಷರು , ಪದಾಧಿಕಾರಿಗಳನ್ನು, ಉಪ ಸಮಿತಿಯ ಸಂಚಾಲಕರು, ಸದಸ್ಯರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುವರ್ಣ ಸಂಭ್ರಮ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ್ ಎಚ್ ರವರು ಮಾತಾನಾಡಿ ಹೆಬ್ರಿಯ ಸರ್ವರ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ಗಣೇಶೋತ್ಸವ ಯಶಸ್ವಿಯಾಗಿದ್ದು ನಿಮ್ಮ ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೆ ಇರಲಿ ಎಂದು ವಿನಂತಿದರು. ಜನಾರ್ಧನ್ ಎಚ್ ಅಧ್ಯಕ್ಷರು ಇವರನ್ನು ಹಾರ್ಧಿಕವಾಗಿ ಅಭಿನಂದಿಸಲಾಯಿತು.

ನಂತರ ನಡೆದ ಆಕರ್ಷಕ ಪುರ ಮೆರವಣಿಗೆಯಲ್ಲಿ ಕೊಂಬು , ಚೆಂಡೆ , ನಾಸಿಕ್ ಬ್ಯಾಂಡ್, ಕೀಲು ಕುದುರೆ , ಕೇರಳ ಸ್ಥಬ್ದ ಚಿತ್ರಗಳು , ಕೀಲು ಕುದುರೆ , ನಂದಿ , ಉಗ್ರ ನರಸಿಂಹ , ಹನುಮಂತ , ಆನೆ ಹೀಗೆ 17 ಕಲಾ ತಂಡಗಳು ಭಾಗವಹಿಸಿದ್ದರು. ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ , ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಧನ್ಯವಾದ ಸಲ್ಲಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗುಣಮಟ್ಟದ ಬೋಧನೆಗೆ ಸಂದ ಗೌರವ: ಉಡುಪಿ ಜಿಲ್ಲೆಯ 15 ಶಿಕ್ಷಕರು ಪ್ರಶಸ್ತಿಗೆ ಆಯ್ಕೆ

ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡ ಉಡುಪಿ ಜಿಲ್ಲೆಯ 15 ಮಂದಿ ಶಿಕ್ಷಕರು, 2025-26ನೇ ಸಾಲಿನ ಜಿಲ್ಲಾ ಮಟ್ಟದ 'ಉತ್ತಮ ಶಿಕ್ಷಕ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಜಿಎಸ್‌ಟಿ ಸುಧಾರಣೆ: ಮೋದಿ ಸರ್ಕಾರದಿಂದ ಜನಸಾಮಾನ್ಯರಿಗೆ ನವರಾತ್ರಿಯ ಶಕ್ತಿ, ದೀಪಾವಳಿಯ ಬೆಳಕು – ಶ್ರೀನಿಧಿ ಹೆಗ್ಡೆ

ನಾಲ್ಕು ಸ್ಲಾಬ್ ಗಳಲ್ಲಿದ್ದ ಜಿ.ಎಸ್.ಟಿ ತೆರಿಗೆ ಮಿತಿಯನ್ನು ಎರಡು ಸ್ಲಾಬ್ ಮಾಡುವ ಮೂಲಕ ಔಷಧಿ, ಜೀವವಿಮೆಯೂ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ.

ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ!

ವಿಜಯವಾಡದ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ, ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಹಾಸನದಲ್ಲಿ ದಸರಾ ಉದ್ಘಾಟನೆ ವಿವಾದ: ಭಾನು ಮುಷ್ತಾಕ್ ಮನೆಗೆ ತೆರಳಿ ‘ಆಹ್ವಾನ ತಿರಸ್ಕರಿಸಿ’ ಎಂದು ಮನವಿ

‘ರಾಷ್ಟ್ರ ರಕ್ಷಣಾ ಸೇನೆ’ ಎಂಬ ಸಂಘಟನೆಯ ಕಾರ್ಯಕರ್ತರು ಭಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ, ಉದ್ಘಾಟನೆ ಆಹ್ವಾನವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.