ಶಿರ್ತಾಡಿಯಲ್ಲಿ ಭೀಕರ ರಸ್ತೆ ಅಪಘಾತ – ಖಾಸಗಿ ಶಾಲಾ ಶಿಕ್ಷಕಿ ಸಾವನ್ನಪ್ಪಿದ ದಾರುಣ ಘಟನೆ

Date:

spot_img

ಮೂಡುಬಿದಿರೆ: ಮೂಡುಬಿದಿರೆಯ ಶಿರ್ತಾಡಿಯಲ್ಲಿ ಕಾರು ಹಾಗೂ ಆಕ್ಟಿವಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಶಾಲೆಯ ಶಿಕ್ಷಕಿ ಸುಜಯಾ ಭಂಡಾರಿ (41) ಮೃತಪಟ್ಟಿದ್ದಾರೆ.

ಮೂಡುಬಿದಿರೆ ನಾಗರಕಟ್ಟೆ ನಿವಾಸಿಯಾದ ಸುಜಯಾ ಭಂಡಾರಿ ಅವರು, ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮುಂಭಾಗದಿಂದ ಬಂದ ಕಾರು ಅವರ ಆಕ್ಟಿವಾಗೆ ಢಿಕ್ಕಿ ಹೊಡೆದಿದೆ. ಪರಿಣಾಮ, ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಮೃತರ ಪತಿ ವಿದೇಶದಲ್ಲಿದ್ದಾರೆ ಹಾಗೂ ಅವರಿಗೆ ಅವಳಿ-ಜವಳಿ ಮಕ್ಕಳು ಇದ್ದಾರೆ. ಈ ಘಟನೆ ಅವರ ಕುಟುಂಬಕ್ಕೆ ಆಘಾತ ತಂದಿದೆ.

ಘಟನೆಯ ಕುರಿತು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ: ಹೆಬ್ರಿಯ ಮುನಿಯಾಲಿನಲ್ಲಿ ವ್ಯಕ್ತಿ ನಾಪತ್ತೆ – ಮಾಹಿತಿ ನೀಡಿ

ಹೆಬ್ರಿಯ ಮುನಿಯಾಲಿನಲ್ಲಿ ವಿಶ್ವನಾಥ ಶೆಟ್ಟಿ ಎಂಬವರು ಜುಲೈ 13 ರಿಂದ ನಾಪತ್ತೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಗೃಹಜ್ಯೋತಿ ಪರಿಶೀಲನೆ: ಗ್ರಾಪಂನಲ್ಲೇ ಪ್ರಕ್ರಿಯೆ ನಡೆಸಲು ಆದೇಶ

ಕಾರ್ಕಳದಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ಇನ್ಮುಂದೆ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಲಂಚ ಕೇಳಿದರೆ ಅಮಾನತು ಎಚ್ಚರಿಕೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ