
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ಅದನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.
ವಿಮಾನವು ಬೆಂಗಳೂರಿನಿಂದ ಟೇಕ್ ಆಫ್ ಆಗಿ ಆಂಧ್ರಪ್ರದೇಶದ ಗಡಿ ಪ್ರವೇಶಿಸುತ್ತಿದ್ದಂತೆ ಈ ತಾಂತ್ರಿಕ ದೋಷ ಎದುರಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್ ಹಾಗೂ ಸಹ ಪೈಲಟ್, ಏರ್ ಕಂಟ್ರೋಲ್ ರೂಂಗೆ ತುರ್ತು ಮಾಹಿತಿ ರವಾನಿಸಿದರು. ಮಾಹಿತಿ ಪಡೆದ ಏರ್ ಕಂಟ್ರೋಲ್ ರೂಂ ವಿಮಾನ ತುರ್ತು ಲ್ಯಾಂಡಿಂಗ್‌ಗೆ ವ್ಯವಸ್ಥೆ ಮಾಡಿತು.
ವಿಮಾನ ಸುಮಾರು ಅರ್ಧಗಂಟೆ ಕಾಲ ಆಗಸದಲ್ಲಿ ಸುತ್ತಾಡಿ ಇಂಧನ ಖಾಲಿ ಮಾಡಿದ ನಂತರ ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.