
ಹಿರಿಯಡ್ಕ : ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಹಿರಿಯಡ್ಕ ಶಾಖೆ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಈ ದಿನ ಮದ್ಯಾಹ್ನ 3.00 ಗಂಟೆಗೆ ನೆರವೇರಿಸಲಾಯಿತು.

ಸುಧೀರ್ಘ 45 ವರುಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ರೀ ನರಸಿಂಹ ನಾಯಕ್ ನಿವೃತ್ತ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಡೂರು ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ವಿಜೇತ್ ಕುಮಾರ್ ಬೆಳ್ಳರ್ಪಾಡಿ , ಸಲಹಾ ಸಮಿತಿ ಸದಸ್ಯರಾದ ವಾಸು ಪ್ರಭು ನರ್ಜೆ ಹಾಗೂ ಸದಾನಂದ ಕಾಮತ್, ಶಾಖಾ ಪ್ರಬಂಧಕರಾದ ಶಾಲಿನಿ ಸಿಬ್ಬಂದಿ ಶ್ರೀಶ ನಾಯಕ್, ಗ್ರಾಹಕರಾದ ಮಧುಕರ್ ನಾಯಕ್ , ದುರ್ಗಾ ವಿನಾಯಕ ಒಂತಿಬೆಟ್ಟು ಇದರ ಮಾಲೀಕರಾದ ಪ್ರಕಾಶ್ ಪ್ರಭು, ಪಿಗ್ಮಿ ಸಂಗ್ರಾಹಕರಾದ ಮುದ್ದು ನಾಯಕ್, ಉಪೇಂದ್ರ ನಾಯಕ್, ಸೊಸೈಟಿಯ ಸ್ವ ಸಹಾಯ ಸಂಘ ದ ಪ್ರೇರಕರಾದ ವಿಷ್ಣು ತೆಂಡೂಲ್ಕರ್ ಮುಂತಾದವರೆಲ್ಲಾ ಉಪಸ್ಥಿತರಿದ್ದರು.

