spot_img

ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

Date:

ಕಾರ್ಕಳ : ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿಸೆಂಟ್ ಪಾಯಸ್ ರವರು ಮಾತನಾಡುತ್ತಾ ಮಕ್ಕಳಿಗೆ ದುಶ್ಚಟದ ಬಗ್ಗೆ ಅರಿವು ಮೂಡಿಸಲು , ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾಯಿಲೆಯಿಂದ ಬಳಲುವ ಜನಸಂಖ್ಯೆಗಿಂತ ದುಶ್ಚಟಕ್ಕೆ ಬಲಿಯಾಗಿ ಮರಣಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಆದುದರಿಂದ ಹದಿಹರೆಯದ ಮಕ್ಕಳು ನೀವು ನಿಮ್ಮ ಭವಿಷ್ಯವನ್ನು ದುಶ್ಚಟಮುಕ್ತ ಸಮಾಜ ಕಟ್ಟುವಲ್ಲಿ ಮುಡಿಪಾಗಿರುವಂತೆ ಮಾಹಿತಿಯನ್ನು ನೀಡುವುದರ ಜೊತೆಗೆ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಕುಮಾರ್ K.M ರವರು ಧರ್ಮಸ್ಥಳ ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುನಿಯಾಲು ಸರಕಾರಿ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲರಾದ ಸುಧಾಕರ್ K.G, ಶೌರ್ಯ ವಿಪತ್ತು ನಿರ್ವಹಣೆಯ ಯೋಜನಾಧಿಕಾರಿಗಳಾದ ಜೈವಂತ ಪಾಟ್ಕರ್ ಮತ್ತು ಕಿಶೋರ್, ಕಾಲೇಜ್ ನ ವಿಭಾಗ ಅಧಿಕಾರಿಗಳಾದ ಚಿತ್ರಾ ಕುಮಾರ್ K.V , ಮಲ್ಲಿಕಾ K , ಪವಿತ್ರ S , ಪುನೀತ್, ಬೋಧಕರಾದ ಬಾಲಚಂದ್ರ ಹೆಬ್ಬಾರ್, ಪ್ರವೇಶ ನಿರ್ವಹಕರಾದ ಗುಣಪಾಲ್ ಜೈನ್,ಕಾರ್ಕಳ ನಗರ ವಲಯದ ಮೇಲ್ವಿಚಾರಕಾರದ ಗೀತಾ ಹೆಗ್ಡೆ , ಕಾಬೆಟ್ಟು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶೀತಲ್ ಹಾಗೂ ಪ್ರಥಮ ದರ್ಜೆಯ 180 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಮೋದ ಮುತಾಲಿಕ್: ‘ಪಾಕ್ ಜೊತೆಗಿನ ಕ್ರಿಕೆಟ್ ಪಂದ್ಯ ದೇಶಕ್ಕೆ ದ್ರೋಹ’

ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಪಂದ್ಯಗಳನ್ನು ವಿರೋಧಿಸಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತ್ಯದ ಆರೋಪಿ ಚಿನ್ನಯ್ಯ ಬುರುಡೆ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 16ಕ್ಕೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಬುರುಡೆಗೆ ಜಾಮೀನು ನಿರಾಕರಿಸುವಂತೆ ವಿಶೇಷ ತನಿಖಾ ದಳ (SIT) ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ.

ದಿನ ವಿಶೇಷ – ಅಂತರರಾಷ್ಟ್ರೀಯ ಚಾಕೊಲೇಟ್ ದಿನ

ಅಂತರರಾಷ್ಟ್ರೀಯ ಚಾಕೊಲೇಟ್ ದಿನವು ಕೇವಲ ಒಂದು ಸಿಹಿತಿಂಡಿಯನ್ನು ತಿನ್ನುವ ದಿನವಲ್ಲ, ಬದಲಾಗಿ ಜೀವನದ ಸಣ್ಣ ಸುಖಗಳನ್ನು ಆಚರಿಸಿ

ಅಕ್ರಮ ನಾಡ ಬಂದೂಕಿನ ಆಕಸ್ಮಿಕ ಗುಂಡಿಗೆ ಹೊಸನಗರದ ವ್ಯಕ್ತಿ ಬಲಿ

ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ 47 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.