
ಕಾರ್ಕಳ ತಾಲೂಕು ಜೋಡು ರಸ್ತೆ ನಿವಾಸಿಯಾದ ಶ್ರೀ ಯಶವಂತ್ಆಚಾರ್ಯ ಮತ್ತು ಪುಷ್ಪ ದಂಪತಿಗಳ ಮಗನಾದ ಸುಜಿತ್ ಆಚಾರ್ಯ ರವರು 69 ನೇ ಹಿರಿಯ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಮತ್ತು 38 ನೇ ರಾಷ್ಟ್ರೀಯ ಆಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ. ಇವರು ಆದಾಯ ತೆರಿಗೆ ವಿಭಾಗ (income tax department)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಫ್ರೆಂಡ್ಸ್ ಪವರ್ ಜಿಮ್ ಟ್ರೈನರ್ ಆಗಿರುವ ಮೊಹಮ್ಮದ್ ಆಲಿ ಅವರ ಶಿಷ್ಯರಾಗಿರುತ್ತಾರೆ.ಇವರ ಮುಂದಿನ ಜೀವನ ಉಜ್ವಲವಾಗಿರಲಿ, ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಫ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ ವತಿಯಿಂದ ಶುಭವನ್ನು ಹಾರೈಸಿರುತ್ತಾರೆ