
ಮಂಗಳೂರು: ಮಂಗಳೂರಿನಲ್ಲಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಹತ್ಯೆಗೀಡಾದ ರೌಡಿಶೀಟರ್ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಭೀಕರ ಹತ್ಯೆಗೆ ಸಹಾಯ ಮಾಡಿದ ಆರೋಪಿಯಾಗಿ ಬಜಪೆಯ ಅಬ್ದುಲ್ ರಜಾಕ್ ಎಂಬಾತನನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಂಧಿತ ರಜಾಕ್ ಈ ಕೊಲೆ ಸಂಚಿಗೆ ಪ್ರಮುಖ ಆರೋಪಿಗಳ ಜೊತೆ ಸೇರಿ ತಂತ್ರ ರೂಪಿಸಿದ್ದಲ್ಲದೆ, ಆರೋಪಿಗಳಿಗೆ ತಲೆ ಮರೆಸಿಕೊಳ್ಳಲು ನೆರವಾಗಿ, ಪರೋಕ್ಷವಾಗಿ ಈ ಕೃತ್ಯದಲ್ಲಿ ಪಾತ್ರವಹಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರಿದಿದ್ದು, ಮತ್ತಿತರ ಆರೋಪಿಗಳ ಪತ್ತೆ ಕಾರ್ಯ ಚುರುಕಾಗಿದ್ದು ಶೀಘ್ರದಲ್ಲೇ ಹೆಚ್ಚಿನ ಆರೋಪಿಗಳ ಬಂಧನ ಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಮಂಗಳೂರಿನಲ್ಲಿ ಭೀತಿಯ ವಾತಾವರಣ ನಡುವೆ ಈಗ ಹೊಸ ಬಂಧನದಿಂದ ತನಿಖೆಗೆ ವೇಗ ಸಿಕ್ಕಿದೆ.