
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಸ್ಕಾನ್‌ಸಂಸ್ಥೆಯ ಮಹಾಪ್ರಸಾದ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು.
ಅದಾನಿ ಗ್ರೂಪ್ ಸಹಯೋಗದಲ್ಲಿ ಸೆಕ್ಟರ್ 19 ರಲ್ಲಿ ಸ್ಥಾಪಿಸಲಾದ ಮಹಾಪ್ರಸಾದ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಯಂತ್ರಗಳ ಮೂಲಕ ಆಹಾರ ತಯಾರಿಸುವ ವಿಧಾನವನ್ನು ಪರಿಶೀಲಿಸಿದರು ಮತ್ತು ಸ್ವಯಂಸೇವಕರಿಂದ ಮಾಹಿತಿ ಪಡೆದರು. ನಂತರ, ಅವರು ಆಹಾರ ಕೌಂಟರ್‌ನಲ್ಲಿ ನಿಂತು ಭಕ್ತರಿಗೆ ಚಪಾತಿ ಬಡಿಸಿದರು.
ಸೋಮವಾರ ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿದ ಸುಧಾ ಮೂರ್ತಿ ಅವರು ದೈನಂದಿನ ಸೇವಾ ಕಾರ್ಯಗಳಿಂದ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.