
ಅಕ್ರಮ ಚಿನ್ನ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟಿ ರನ್ಯಾ ರಾವ್ ಕುರಿತು ನಿರ್ದೇಶಕ ರವಿ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದಾರೆ.
ಮಾಣಿಕ್ಯ ಸಿನಿಮಾದ ಶೂಟಿಂಗ್ ವೇಳೆ ‘ರನ್ಯಾ’ ಹೆಸರಿನ ಹುಟ್ಟು
ಶ್ರೀವತ್ಸ ಅವರ ಪ್ರಕಾರ, ಮಾಣಿಕ್ಯ ಸಿನಿಮಾದಲ್ಲಿ ನಟಿಸಬೇಕಾಗಿದ್ದ ರಮ್ಯಾ ಅವರ ಬದಲಿಗೆ ರನ್ಯಾ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ನಟ ಸುದೀಪ್ ಅವರೇ ಹರ್ಷವರ್ಧಿನಿ ಎನ್ನುವ ಹೆಸರನ್ನು ‘ರನ್ಯಾ’ ಎಂದು ಬದಲಾವಣೆ ಮಾಡಿದ್ದರು. ಈ ಹೆಸರು ಆ ಸಮಯದಲ್ಲಿ ಸಾಕಷ್ಟು ಜನಪ್ರಿಯವಾಯಿತು.
ಅವಕಾಶದ ನಂತರ ಹಿಂದೇಟು
ಮಾಣಿಕ್ಯ ಮತ್ತು ಪಟಾಕಿ ಸಿನಿಮಾದಲ್ಲಿ ನಟಿಸಿದ ಬಳಿಕ ರನ್ಯಾ ರಾವ್ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ.
ಸುದೀಪ್ ಅವರ ಶ್ರಮ
“ನಟನೆಯಲ್ಲಿ ಅಷ್ಟೊಂದು ಪರಿಣಿತರಾಗಿರದ ಕಾರಣ, ಆಕೆ ಚೆನ್ನಾಗಿ ನಟಿಸಲು ಸುದೀಪ್ ಸಾಕಷ್ಟು ಶ್ರಮಪಟ್ಟಿದ್ದರು. ಆದರೆ, ಇಂದು ಈ ರೀತಿಯ ಪ್ರಕರಣದಲ್ಲಿ ಆಕೆ ಸಿಕ್ಕಿಬೀಳುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ” ಎಂದು ಶ್ರೀವತ್ಸ ಬೇಸರ ವ್ಯಕ್ತಪಡಿಸಿದರು.